Asianet Suvarna News Asianet Suvarna News

ಕನ್ನಡದ ಸೊಬಗು ಸಾರುವ ಬಸ್ ಸ್ಟಾಂಡ್ ಕಟ್ಟಿದ ಮಹನೀಯ ಇವರು!

ಬೆಂಗಳೂರಿನ ಸಹಕಾರ ನಗರದಲ್ಲಿ ಅಪರೂಪದ ಪರಿಸರ ಮತ್ತು ಕನ್ನಡ ಪ್ರೇಮಿ ಇದ್ದಾರೆ. ವರ್ಷ ಪೂರ್ತಿ ಸ್ವಂತ ಹಣ ವ್ಯಯಿಸಿ ಕೆಲಸಗಾರರನ್ನು ನೇಮಿಸಿ ಗಿಡಮರಗಳನ್ನು ಬೆಳೆಸುವ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಅಲ್ಲದೇ ಕನ್ನಡ ಕಲಾ ವೈಭವವನ್ನು ಸಾರುವ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿ ನಿತ್ಯವೂ ಕನ್ನಡ ಕಂಪನ್ನು ಪಸರಿಸುತ್ತಿದ್ದಾರೆ. ಅವರ ಹೆಸರು ಸುರೇಶ್ ಕುಮಾರ್. ಪತ್ನಿ ಹೇಮಾವತಿ ಹಾಗೂ ಮಕ್ಕಳ ಸಹಾಕಾರದಿಂದ ಸಹಕಾರ ನಗರ ಸೇರಿದಂತೆ ಬೆಂಗಳೂರಿನ ಹಲವಾರು ಕಡೆಗಳಲ್ಲಿ ಗಿಡಗಳನ್ನು ನೆಟ್ಟು, ನೆಟ್ಟ ಗಿಡಗಳ ಬೆಳವಣಿಗೆಗೆ ಸೂಕ್ತ ರೀತಿಯ ವ್ಯವಸ್ಥೆ ಮಾಡಿದ್ದಾರೆ. ಇದರ ಜೊತೆ ಜೊತೆಗೆ ಕನ್ನಡದ ಪ್ರೀತಿಯನ್ನು ಎಲ್ಲರ ಮನದಲ್ಲಿ ನೆಲೆಗೊಳ್ಳುವಂತೆ ಮಾಡುತ್ತಿದ್ದಾರೆ.

Suresh Kumar built a Bus Stand it describes kannada

ಬೆಂಗಳೂರಿನ ಸಹಕಾರ ನಗರದಲ್ಲಿ ಅಪರೂಪದ ಪರಿಸರ ಮತ್ತು ಕನ್ನಡ ಪ್ರೇಮಿ ಇದ್ದಾರೆ. ವರ್ಷ ಪೂರ್ತಿ ಸ್ವಂತ ಹಣ ವ್ಯಯಿಸಿ ಕೆಲಸಗಾರರನ್ನು ನೇಮಿಸಿ ಗಿಡಮರಗಳನ್ನು  ಬೆಳೆಸುವ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಅಲ್ಲದೇ ಕನ್ನಡ ಕಲಾ ವೈಭವವನ್ನು ಸಾರುವ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿ ನಿತ್ಯವೂ ಕನ್ನಡ ಕಂಪನ್ನು ಪಸರಿಸುತ್ತಿದ್ದಾರೆ. ಅವರ ಹೆಸರು ಸುರೇಶ್ ಕುಮಾರ್. ಪತ್ನಿ ಹೇಮಾವತಿ ಹಾಗೂ ಮಕ್ಕಳ ಸಹಾಕಾರದಿಂದ ಸಹಕಾರ ನಗರ ಸೇರಿದಂತೆ ಬೆಂಗಳೂರಿನ ಹಲವಾರು ಕಡೆಗಳಲ್ಲಿ ಗಿಡಗಳನ್ನು ನೆಟ್ಟು, ನೆಟ್ಟ ಗಿಡಗಳ ಬೆಳವಣಿಗೆಗೆ ಸೂಕ್ತ ರೀತಿಯ ವ್ಯವಸ್ಥೆ ಮಾಡಿದ್ದಾರೆ. ಇದರ ಜೊತೆ ಜೊತೆಗೆ ಕನ್ನಡದ ಪ್ರೀತಿಯನ್ನು ಎಲ್ಲರ ಮನದಲ್ಲಿ ನೆಲೆಗೊಳ್ಳುವಂತೆ ಮಾಡುತ್ತಿದ್ದಾರೆ.

ಪರಿಸರ, ಪರಂಪರೆ ಉಳಿವಿಗೆ ಸಾಲು ಗಿಡಗಳುಕನ್ನಡ ಭಾಷೆ ಹಾಗೂ ಪರಿಸರವನ್ನು ತಮ್ಮ ಸೇವಾ ವಲಯವಾಗಿಸಿಕೊಂಡಿರುವ ಸುರೇಶ್ ಕುಮಾರ್ ಅವರು 2007 ರಲ್ಲಿ ಸಹಕಾರನಗರದಲ್ಲಿ ರಸ್ತೆ ಹಾಗೂ ರೈಲ್ವೆ ಎರಡು  ಬದಿಗಳಲ್ಲಿ ಟಾಬೋಬಿಯಾ ರೋಸಿಯಾ, ಟಾಬಿಯಾ ಹೌಲ್ಯಾಂಡ್, ಬೇವು, ಹೊಂಗೆ, ಆಕಾಶ ಮಲ್ಲಿಗೆ, ಡೌಲಿ ಚಂದಾ, ಕ್ಯಾಶಿಯಾ ಪಿಲೆಟ್, ಫೇತೋಡಿಯಾ ಸೇರಿದಂತೆ ಸುಮಾರು ಎರಡು ಸಾವಿರ ಗಿಡಗಳನ್ನು ನೆಟ್ಟು ಅವುಗಳಿಗೆ ನೀರುಣಿಸಲು 25 ಗಿಡಗಳಿಗೆ ಒಂದರಂತೆ ನೀರಿನ ತೊಟ್ಟಿಗಳನ್ನು ಕಟ್ಟಿಸಿ ಇಂದಿಗೂ ಪೋಷಿಸುತ್ತಿದ್ದಾರೆ.

ನೆಟ್ಟ ಪ್ರತಿಯೊಂದು ಸಸಿಗೂ ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಸ್ಮರಿಸುವುದಕ್ಕಾಗಿ ಸಾಹಿತ್ಯ, ಕಲೆ, ವಿಜ್ಞಾನ, ಕ್ರೀಡೆ ಮುಂತಾದ ಹಲವು ಕ್ಷೇತ್ರಗಳಲ್ಲಿ ನಾಡಿನ ಕೀರ್ತಿ ಹೆಚ್ಚಿಸಿದ ಕರುನಾಡಿನ ಸಾಧಕರ ಹೆಸರನ್ನು ನಾಮಕರಣ ಮಾಡಿದ್ದಾರೆ. ಸುವರ್ಣ ಕರ್ನಾಟಕ ಬಸ್ ನಿಲ್ದಾಣ ಸ್ವತಃ ಬಿಲ್ಡರ್ ಆಗಿರುವ ಸುರೇಶ್ ಕುಮಾರ್ ಅವರು ಮಾಡುವ ಕೆಲಸದಲ್ಲಿ ಉಳಿದ ಕಬ್ಬಿಣ, ಸಿಮೆಂಟ್, ಜಲ್ಲಿ, ಮರಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವ್ಯರ್ಥ ಮಾಡದೇ ಸಾರ್ವಜನಿಕರ ಒಳಿತಿಗಾಗಿ ಹೊಯ್ಸಳರ ಕಾಲದ ವಾಸ್ತು ಶಿಲ್ಪ ಮಾದರಿಯಲ್ಲಿ ಭವ್ಯ ಬಸ್ ನಿಲ್ದಾಣವನ್ನು ಸಹಕಾರನಗರದಲ್ಲಿ 2017 ರ ಜನವರಿಯಲ್ಲಿ ನಿರ್ಮಿಸಿದ್ದಾರೆ.

ಈ ನಿಲ್ದಾಣದೊಳಗೆ ಕಾಲಿಟ್ಟರೇ ಸಾಕು ಕನ್ನಡ ಗೀತೆಗಳು ಮೊಳಗಲಿವೆ. ಬೆಳಗ್ಗೆ 6 ಕ್ಕೆ ಸುಪ್ರಭಾತ, 7 ಕ್ಕೆ ಭಕ್ತಿಗೀತೆಗಳು, 8 ಕ್ಕೆ ಭಾವಗೀತೆಗಳು, 10 ಕ್ಕೆ ಹೊಸ ಚಿತ್ರಗೀತೆಗಳು, 12 ಕ್ಕೆ ಸುಗಮ ಸಂಗೀತಾ, 1 ಕ್ಕೆ ಜನಪದಗೀತೆಗಳು, 3 ಕ್ಕೆ ರಂಗಗೀತೆಗಳು, 4 ಕ್ಕೆ ಹಳೆ ಚಿತ್ರಗೀತೆಗಳು, ರಾತ್ರಿ 7ಕ್ಕೆ ಭಾವಗೀತೆಗಳು, 8 ಕ್ಕೆ ಹಳೆ ದುಡಿದ ಹಣದಲ್ಲಿ ಸ್ವಲ್ಪ ಪಾಲನ್ನು ಸಮಾಜ ಸೇವೆಗೆ ನೀಡುವ ಸುರೇಶ್ ಕುಮಾರ್ ಗೀತೆಗಳು ಪ್ರಯಾಣಿಕರಿಗೆ ಆನಂದವನ್ನು ನೀಡುತ್ತವೆ.

ಅಲ್ಲದೇ, ಕನ್ನಡ ಪತ್ರಿಕೆಗಳ ಓದುವ ಹವ್ಯಾಸ ಬೆಳೆಸುವಂತೆ ಮಾಡಲು ತಮ್ಮ ಸ್ವಂತ ಖರ್ಚಿನಲ್ಲೇ ಕನ್ನಡ ದಿನಪತ್ರಿಕೆಗಳನ್ನು ಬಸ್ ನಿಲ್ದಾಣಕ್ಕೆ ಹಾಕಿಸುತ್ತಾರೆ. ರಕ್ಷಣೆ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಇಲ್ಲಿ ಅಳವಡಿಸಲಾಗಿದೆ. ನಿಲ್ದಾಣದ ತುಂಬ ಕನ್ನಡದ ಸಾಹಿತಿಗಳು, ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳೊಂದಿಗೆ ವರ್ಣಮಯ ಚಿತ್ರ, ನಾಡು-ನುಡಿಗಾಗಿ ದುಡಿದ ಧುರೀಣರ, ಕ್ರೀಡಾಪಟುಗಳು, ವಿಜ್ಞಾನಿಗಳ ಮಾಹಿತಿ ಪಟ್ಟಿಯೇ ಅನಾವರಣಗೊಂಡಿದೆ.

ಸುರೇಶ್ ಸೇವೆಗೆ ಆಕರ್ಷಿತರಾದ ಶಾಸಕರು ಕನ್ನಡದ ಬಗ್ಗೆ ಅರಿವು ಮೂಡಿಸಲು ಸಹಕಾರ ನಗರದ ಪ್ರತಿ ಮನೆ ಮನೆಗೂ ಕನ್ನಡ ನಾಮಫಲಕ ನೀಡುತ್ತಾ ಬಂದಿದ್ದಾರೆ. ಇವರ ಅನುಕರಣೀಯ ಕಾರ್ಯವನ್ನು ಗಮನಿಸಿದ ದೇವನಹಳ್ಳಿ ಶಾಸಕ ಪಿಳ್ಳೆ ಮುನಿಸ್ವಾಮಪ್ಪ ತಮ್ಮ ತಾಲೂಕಿನಲ್ಲೂ ಇದೇ ರೀತಿ ನಿಲ್ದಾಣ ನಿರ್ಮಿಸಲು ಮುಂದಾಗಿ ಇವರ ಸಲಹೆ, ಸಹಕಾರ ಕೇಳಿದ್ದರು. ಅದರಂತೆ ಸುರೇಶ್ ಅವರು ತಮ್ಮ ಕೆಲಸಗಾರರನ್ನೇ ಕರೆದುಕೊಂಡು ಹೋಗಿ ಒಂದು ಮಾದರಿ ಬಸ್ ನಿಲ್ದಾಣ ನಿರ್ಮಿಸಿಕೊಟ್ಟು ಬಂದಿದ್ದಾರೆ.

ಇದೇ ರೀತಿಯ ಸುಮಾರು 25 ರಿಂದ 30 ಬಸ್  ನಿಲ್ದಾಣಗಳು ದೇವನಹಳ್ಳಿಯಲ್ಲಿ ನಿರ್ಮಾಣಗೊಳ್ಳುತ್ತಿವೆ. ಇವರ ಸೇವಾ ವ್ಯಾಪ್ತಿ ಸಹಕಾರ ನಗರಕ್ಕೆ ಸೀಮಿತವಾಗದೇ ಪೂರ್ಣ ಬೆಂಗಳೂರಿನಲ್ಲಿ ಕನ್ನಡದ ಬಗ್ಗೆ ಮಾಹಿತಿ ನೀಡಬೇಕು ಎನ್ನುವ ನಿಟ್ಟಿನಲ್ಲಿ ಡಾ. ರಾಜಕುಮಾರ್ ಸಮಾಧಿ ಬಳಿಯ ಕಂಠೀರವ ಸ್ಟುಡಿಯೋ ಬಸ್ ನಿಲ್ದಾಣ ನಿರ್ಮಿಸಿದ್ದು ಉದ್ಘಾಟನೆಗೆ ಸಜ್ಜಾಗಿದೆ.

‘ನಮ್ಮಿಂದ ಸಮಾಜಕ್ಕೆ ಏನು ಅನುಕೂಲವಾಗುತ್ತದೋ ಅದನ್ನು ಹಿಂದೆ ಮುಂದೆ ನೋಡದೇ ಮಾಡಿಬಿಡಬೇಕು. ನನಗೆ ಬೆಂಗಳೂರಿನಲ್ಲಿ ಎಲ್ಲವೂ ಸಿಕ್ಕುತ್ತಿದೆ. ಆದರೆ ಶುದ್ಧ ಗಾಳಿ, ನಮ್ಮ ಸಂಸ್ಕೃತಿಯೇ ಮರೆಯಾಗುತ್ತಿದೆ ಎನ್ನಿಸಿತು. ಅದಕ್ಕಾಗಿಯೇ ನನ್ನ ಕೈಲಾದಷ್ಟು ಕೆಲಸ ಮಾಡೋಣ ಎಂದುಕೊಂಡು ಈ ರಂಗಕ್ಕೆ ಇಳಿದಿದ್ದೇನೆ’ ಎನ್ನುವ ಸುರೇಶ್ ಕುಮಾರ್ ಅವರ ಕಾರ್ಯ ನಿಜಕ್ಕೂ ಮಾದರಿಯಾದದ್ದು.
ದೂ:  9448046373

Follow Us:
Download App:
  • android
  • ios