ಸಿಬಿಐ ನ್ಯಾಯಾಧೀಶ ಬಿ.ಎಚ್‌. ಲೋಯಾ ನಿಗೂಢ ಸಾವಿನ ಪ್ರಕರಣದ ತೀರ್ಪು ಹೊರ ಬಿದ್ದ ಅರ್ಧ ಗಂಟೆ ಬಳಿಕ ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ಗೆ ಕನ್ನ ಹಾಕಲಾದ ಘಟನೆ ನಡೆದಿದೆ.

ನವದೆಹಲಿ: ಸಿಬಿಐ ನ್ಯಾಯಾಧೀಶ ಬಿ.ಎಚ್‌. ಲೋಯಾ ನಿಗೂಢ ಸಾವಿನ ಪ್ರಕರಣದ ತೀರ್ಪು ಹೊರ ಬಿದ್ದ ಅರ್ಧ ಗಂಟೆ ಬಳಿಕ ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ಗೆ ಕನ್ನ ಹಾಕಲಾದ ಘಟನೆ ನಡೆದಿದೆ.

ಕನ್ನ ಹಾಕುವ ಯತ್ನ ನಡೆದಿರುವುದನ್ನು ತಾಂತ್ರಿಕ ವಿಭಾಗ ಪತ್ತೆ ಹಚ್ಚಿದೆ ಮತ್ತು ವೆಬ್‌ಸೈಟ್‌ ರಕ್ಷಣೆಗೆ ಸಂಬಂಧಿಸಿದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಮೂಲಗಳು ದೃಢಪಡಿಸಿವೆ.

ವೆಬ್‌ಸೈಟ್‌ ಕಾರ್ಯ ನಿರ್ವಹಣೆ ಎರಡು ಗಂಟೆಗಳ ಕಾಲ ನಿಧಾನವಾಗಿತ್ತು. ಕಳೆದ ಹದಿನೈದು ದಿನಗಳಲ್ಲಿ ಕೆಲವು ಸರ್ಕಾರಿ ವೆಬ್‌ಸೈಟ್‌ಗಳಿಗೆ ಕನ್ನ ಹಾಕಲಾಗಿದೆ. ಇದರಲ್ಲಿ ಚೀನಾದ ಹ್ಯಾಕರ್‌ಗಳ ಕೈವಾಡವಿರುವ ಶಂಕೆಯಿದೆ.