ಲೋಯಾ ಸಾವು ಪ್ರಕರಣ: 2 ಪ್ರಕರಣಗಳನ್ನು ಸುಪ್ರೀಂ'ಗೆ ವರ್ಗಾಯಿಸಲು ಆದೇಶ

Supreme Court transfers to itself two cases in Bombay High Court
Highlights

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಇತರ ನ್ಯಾಯಾಲಯಗಳಲ್ಲಿರುವ ಮಧ್ಯಂತರ ಅಥವಾ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಬಾರದಂದು ಆದೇಶಿಸಿದೆ.  

ನವದೆಹಲಿ(ಜ.22): ಸಿಬಿಐ ನ್ಯಾಯಾಧೀಶ ಬಿ.ಹೆಚ್. ಲೋಯಾ ಅನುಮಾಸ್ಪದ ಸಾವಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್'ನಲ್ಲಿದ್ದ 2 ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ವರ್ಗಾಯಿಸುವಂತೆ ಆದೇಶಿಸಿದೆ.   

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಇತರ ನ್ಯಾಯಾಲಯಗಳಲ್ಲಿರುವ ಮಧ್ಯಂತರ ಅಥವಾ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಬಾರದಂದು ಆದೇಶಿಸಿದೆ.  ಮಹಾರಾಷ್ಟ್ರ ಸರ್ಕಾರ ಲೋಯಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಿದ್ದು, ತುರ್ತು ಪ್ರಕರಣ ಇದಾಗಿರುವ ಕಾರಣ ಈ ಅರ್ಜಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಕೋರ್ಟ್'ಗಳಿಗೆ ತಿಳಿಸಿದೆ.

ಪೆ.2ರಂದು ವಿಚಾರಣೆ ಬರುವ ಪೀಠದಲ್ಲಿ ಖಾನ್ವಿಲ್ಕರ್ ಹಾಗೂ ಚಂದ್ರಚೂಡ್ ಇರುತ್ತಾರೆ. ಸಂಶಯಾಸ್ಪದವಾಗಿ ಸಾವನ್ನಪ್ಪಿದ ಲೋಯಾ ಅವರು ಸೋಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆರೋಪಿಯಾಗಿದ್ದು, ಈಗ ಖುಲಾಸೆಯಾಗಿದ್ದಾರೆ.

loader