Asianet Suvarna News Asianet Suvarna News

ಶಬರಿಮಲೆ ಯಾತ್ರೆ : 41 ದಿನದ ಇಂದ್ರಿಯ ನಿಗ್ರಹಕ್ಕೆ ಆಕ್ರೋಶ

ಶಬರಿಮಲೆ ದೇಗುಲಕ್ಕೆ ತೆರಳುವ ಮಹಿಳೆಯರು 41  ದಿವಸದ ‘ಇಂದ್ರಿಯ ನಿಗ್ರಹ’ ವ್ರತ ಪಾಲನೆ ಮಾಡಿರಬೇಕು ಎಂದು ದೇವಾಲಯ ಆಡಳಿತ ನೋಡಿಕೊಳ್ಳುವ ದೇವಸ್ವಂ ಮಂಡಳಿ ರೂಪಿಸಿದ ನಿಯಮ ‘ಅಸಾಧ್ಯವಾದದ್ದು’ ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿದೆ. 

Supreme Court Slams Sabarimala Temple Board
Author
Bengaluru, First Published Jul 20, 2018, 11:05 AM IST

ನವದೆಹಲಿ: ಶಬರಿಮಲೆ ದೇಗುಲಕ್ಕೆ ತೆರಳುವ ಮಹಿಳೆಯರು 41  ದಿವಸದ ‘ಇಂದ್ರಿಯ ನಿಗ್ರಹ’ ವ್ರತ ಪಾಲನೆ ಮಾಡಿರಬೇಕು ಎಂದು ದೇವಾಲಯ ಆಡಳಿತ ನೋಡಿಕೊಳ್ಳುವ ದೇವಸ್ವಂ ಮಂಡಳಿ ರೂಪಿಸಿದ ನಿಯಮ ‘ಅಸಾಧ್ಯವಾದದ್ದು’ ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿದೆ. ದೇವಾಲಯಕ್ಕೆ ಹೋಗಲು ಗಂಡು-ಹೆಣ್ಣಿನ ನಡು ವೆ ಲಿಂಗ ತಾರತಮ್ಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮರುದಿನ ವೇ ಕೋರ್ಟ್ ಮತ್ತೊಂದು ಕಟು ಟೀಕೆ ಮಾಡಿದೆ. 

ಶಬರಿಮಲೆ ದೇಗುಲಕ್ಕೆ 10 ರಿಂದ 50 ವರ್ಷದ ವಯೋಮಾನದ ಮಹಿಳೆಯರಿಗೂ (ರಜಸ್ವಲೆಯಾಗುವ ಹೆಣ್ಣುಮಕ್ಕಳಿಗೂ) ಪ್ರವೇಶಾವಕಾಶ ನೀಡಬೇಕು ಎಂದು ಸಲ್ಲಿಸಿದ ಅರ್ಜಿ ವಿಚಾ ರಣೆಯನ್ನು ಗುರುವಾರವೂ ಮುಂದುವರಿಸಿದ ಸಿಜೆಐ ನ್ಯಾ| ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ, ‘ಇಂತಹ ಅಸಾಧ್ಯ ಷರತ್ತಿನಿಂದಲೇ 10 ರಿಂದ 50 ವರ್ಷ ವಯೋಮಾನದ ಮಹಿಳೆಯರಿಗೆ ದೇಗುಲ ಪ್ರವೇಶಿಸಲು ನಿಷೇಧಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿತು. ಜುಲೈ 24 ರಂದು ಪ್ರಕರಣದ ವಿಚಾರಣೆ ಮುಂದುವರಿಯಲಿದೆ.

Follow Us:
Download App:
  • android
  • ios