ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಅನ್ನು ಕನಿಷ್ಠ 100 ವರ್ಷಗಳವರೆಗೆ ರಕ್ಷಿಸಲು ವಿಸ್ತೃತ ಮತ್ತು ಸಮಗ್ರ ದಾಖಲೆಗಳನ್ನು ಒದಗಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.

ನವದೆಹಲಿ(ಡಿ.9): ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಅನ್ನು ಕನಿಷ್ಠ 100 ವರ್ಷಗಳವರೆಗೆ ರಕ್ಷಿಸಲು ವಿಸ್ತೃತ ಮತ್ತು ಸಮಗ್ರ ದಾಖಲೆಗಳನ್ನು ಒದಗಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಸೂಚಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಜ್ ವಿಷಮ ಚತುರ್ಭುಜ ವಲಯ (ಟಿಟಿಝಡ್) ಪ್ರಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಇರುವ ಕ್ರಮಗಳು ಕೇವಲ ತಾತ್ಕಾಲಿಕ ಎಂದು ಹೇಳಿದ ಸುಪ್ರೀಂ, ದೀರ್ಘಕಾಲೀನ ಯೋಜನೆಗಳ ಅಗತ್ಯವಿದೆ ಎಂದಿದೆ.

ತಾಜ್ ರಕ್ಷಣೆ ವರದಿ ಪೂರ್ವ ಸಿದ್ಧತೆಯಿಂದ ಕೂಡಿಲ್ಲ. ಎಲ್ಲರೂ ಒಟ್ಟಿಗೆ ಕುಳಿತು ಮುಂದಿನ ತಲೆಮಾರಿಗೆ ಯಾವ ರೀತಿ ತಾಜ್ ಮಹಲ್ ಅನ್ನು ರಕ್ಷಿಸಬೇಕು ಎಂದು ಯೋಜಿಸಬೇಕಿದೆ ಎಂದಿದೆ ಸುಪ್ರೀಂ.