ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆ ಅನಾವಶ್ಯಕವಾಗಿ ಒಂದು ದಶಕಕ್ಕೂ ಹೆಚ್ಚು ಅವಧಿ ತೆಗೆದುಕೊಂಡಿರುವುದನ್ನು ತಪ್ಪು ಎಂದು ಮನಬಿಚ್ಚಿ ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್ ವಿಚಾರಣೆ ವಿಳಂಬವಾಗಿದ್ದಕ್ಕೆ ತನ್ನ ಕಕ್ಷಿದಾರರ ಬಳಿ ಕ್ಷಮೆ ಕೋರಿದೆ.

ನವದೆಹಲಿ(ಡಿ.4): ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆ ಅನಾವಶ್ಯಕವಾಗಿ ಒಂದು ದಶಕಕ್ಕೂ ಹೆಚ್ಚು ಅವಧಿ ತೆಗೆದುಕೊಂಡಿರುವುದನ್ನು ತಪ್ಪು ಎಂದು ಮನಬಿಚ್ಚಿ ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್ ವಿಚಾರಣೆ ವಿಳಂಬವಾಗಿದ್ದಕ್ಕೆ ತನ್ನ ಕಕ್ಷಿದಾರರ ಬಳಿ ಕ್ಷಮೆ ಕೋರಿದೆ.

ಒಂದಕ್ಕೊಂದು ಸಂಬಂಧಿಸಿದ ಆದರೆ 2 ಭಿನ್ನ ಪ್ರಕರಣಗಳಿಗೆ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಒಂದೇ ದಿನ ತದ್ವಿರುದ್ಧ ತೀರ್ಪು ನೀಡಿದ್ದ ಹಿನ್ನೆಲೆ ಪ್ರಕರಣದ ವಿಚಾರಣೆ 13 ವರ್ಷ ವಿಳಂಬಕ್ಕೆ ಕಾರಣವಾಗಿತ್ತು. ಇದು ಕಾನೂನು ಸಂಬಂಧಿ ಗೊಂದಲವನ್ನುಂಟು ಮಾಡಿತ್ತು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.