500 ಮತ್ತು 1000 ರೂಪಾಯಿ ನೋಟು ರದ್ದು ರದ್ದು ಪ್ರಶ್ನಿಸಿ ಕಳೆದ ತಿಂಗಳು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಕೇಂದ್ರದ ಈ ಆರ್ಥಿಕ ನೀತಿಯಲ್ಲಿ ಕೋರ್ಟ್ ಮಧ್ಯಪ್ರವೇಶಿಸಬಹುದೇ ಎಂಬ ಬಗ್ಗೆ ಪಂಚ ಪೀಠ ನಿರ್ಧರಿಸಲಿದೆ.

ನವದೆಹಲಿ(ಡಿ.16): 500 ಮತ್ತು 1000 ರುಪಾಯಿ ನೋಟುಗಳನ್ನ ರದ್ದು ಮಾಡಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಕಾನೂನಾತ್ಮಕವೇ ಅಥವಾ ಮೂಲಭೂತ ಹಕ್ಕುಗಳ ಉಲ್ಲಂಘನೆಯೇ..? ಎಂಬ ಬಗ್ಗೆ ಸುಪ್ರೀಂಕೋರ್ಟ್`ನ ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠ ನಿರ್ಧರಿಸಲಿದೆ ಎಂದು ಶುಕ್ರವಾರ ಸುಪ್ರೀಂಕೋರ್ಟ್ ಹೇಳಿದೆ.

500 ಮತ್ತು 1000 ರೂಪಾಯಿ ನೋಟು ರದ್ದು ಪ್ರಶ್ನಿಸಿ ಕಳೆದ ತಿಂಗಳು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಕೇಂದ್ರದ ಈ ಆರ್ಥಿಕ ನೀತಿಯಲ್ಲಿ ಕೋರ್ಟ್ ಮಧ್ಯಪ್ರವೇಶಿಸಬಹುದೇ ಎಂಬ ಬಗ್ಗೆಯೂ ಪಂಚ ಪೀಠ ನಿರ್ಧರಿಸಲಿದೆ.