ಖಜಾನೆಯಿಂದ 37.7 ಕೋಟಿ ಹಣ ಅಕ್ರಮವಾಗಿ ತೆಗೆದ ಆರೋಪಕ್ಕೆ ಸಂಬಂಧಿಸಿದಂತೆ ಲಾಲೂ ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಜಾರ್ಖಂಡ್ ಹೈಕೋರ್ಟ್ನಲ್ಲಿ ಲಾಲೂ ಅರ್ಜಿ ಸಲ್ಲಿಸಿದ್ದರು. ಜಾರ್ಖಂಡ್ ಹೈಕೋರ್ಟ್ ಲಾಲೂರನ್ನು ಖುಲಾಸೆಗೊಳಿಸಿತ್ತು.
ನವದೆಹಲಿ(ಮೇ.08): 945 ಕೋಟಿ ರೂಪಾಯಿಗಳ ಮೇವು ಹಗರಣ ಸಂಬಂಧ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ಗೆ ಸಂಕಷ್ಟ ಎದುರಾಗಿದೆ. ಲಾಲೂ ವಿರುದ್ಧದ ಕ್ರಿಮಿನಲ್ ಸಂಚು ಆರೋಪವನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. 945 ಕೋಟಿ ಮೇವು ಹಗರಣದಲ್ಲಿ ಲಾಲೂ ಅಪರಾಧಿ. ಪ್ರತಿ ಕೇಸ್ನ ಪ್ರತ್ಯೇಕ ವಿಚಾರಣೆಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದು, ಕ್ರಿಮಿನಲ್ ಸಂಚು ಆರೋಪದಲ್ಲಿ ವಿಚಾರಣೆಗೆ ಆದೇಶಿಸಿದೆ. ಈ ಮೂಲಕ ಲಾಲೂ ಮೇಲೆ ಇರುವ ಎಲ್ಲ ಆರೋಪಗಳ ಪ್ರತ್ಯೇಕ ವಿಚಾರಣೆ ನಡೆಯಲಿದೆ. ಸಿಬಿಐ ತನ್ನ ತನಿಖೆಯನ್ನು ಮುಂದುವರೆಸಬುಹದು ಅಂತಾನೂ ಹೇಳಿದ್ದು, ಆರ್ಜೆಡಿ ಮುಖ್ಯಸ್ಥರಿಗೆ ಭಾರೀ ಸಂಕಷ್ಟ ಎದುರಾಗಿದೆ.
ಖಜಾನೆಯಿಂದ 37.7 ಕೋಟಿ ಹಣ ಅಕ್ರಮವಾಗಿ ತೆಗೆದ ಆರೋಪಕ್ಕೆ ಸಂಬಂಧಿಸಿದಂತೆ ಲಾಲೂ ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಜಾರ್ಖಂಡ್ ಹೈಕೋರ್ಟ್ನಲ್ಲಿ ಲಾಲೂ ಅರ್ಜಿ ಸಲ್ಲಿಸಿದ್ದರು. ಜಾರ್ಖಂಡ್ ಹೈಕೋರ್ಟ್ ಲಾಲೂರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಸಿಬಿಐ ಅರ್ಜಿ ಸಲ್ಲಿಸಿತ್ತು.
ಲಾಲು ಪ್ರಸಾದ್ ಅವರಿಗೆ ಮೇವು ಪ್ರಕರಣಕ್ಕೆ ಸಂಬಂಧಿಸಿದಂತೆ 2013 ಅಕ್ಟೋಬರ್'ನಲ್ಲಿ 5 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಜೊತೆಗೆ ಚುನಾವಣೆಗೆ ಸ್ಪರ್ಧಿಸಲು ಕೂಡ ಅನರ್ಹಗೊಂಡಿದ್ದರು. ನಂತರ ಜಾಮೀನು ಪಡೆದುಕೊಂಡಿದ್ದರು.ಅವಿಭಜಿತ ಬಿಹಾರ್'ನಲ್ಲಿ 1990ರ ದಶಕದಲ್ಲಿ ಲಾಲು ಪ್ರಸಾದ್ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 1 ಸಾವಿರ ಕೋಟಿಗೂ ಹೆಚ್ಚಿನ ಅವ್ಯವಹಾರ ನಡೆದ ಮೇವು ಹಗರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಹಗರಣದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು.
