ಮುಂಬೈ :  ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಗೆ ಇದೀಗ ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ 2014ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. 

ಬಾಂಬೆ ಹೈ ಕೋರ್ಟ್ ನೀಡಿದ ತೀರ್ಪು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಸತೀಶ್ ಉಕೆ ಎನ್ನುವವರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ತಮ್ಮ ವಿರುದ್ಧದ 2 ಪ್ರಕರಣಗಳ ಬಗ್ಗೆ ನಾಮಪತ್ರ ಸಲ್ಲಿಕೆ ವೇಳೆ ಮಾಹಿತಿ ನೀಡದೇ  1951ರ ಜನಪ್ರತಿನಿಧಿ  ಕಾಯಿದೆ ಉಲ್ಲಂಘನೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು. 

ನ್ಯಾ.ರಂಜನ್ ಗೊಗೋಯ್, ನ್ಯಾ.ಎಸ್.ಕೆ ಕೌಲ್, ನ್ಯಾ.ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ, ಬಾಂಬೆ ಹೈ ಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ ನೋಟಿಸ್ ಜಾರಿ ಮಾಡಿದೆ.  

ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನಾವಿಸ್ ವಿರುದ್ಧ ಒಟ್ಟು 22 ಕ್ರಿಮಿನಲ್ ಪ್ರಕರಣಗಳಿವೆ ಎಂದು myneta.info ನಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಹಲ್ಲೆ ಪ್ರಕರಣಗಳೂ ಸೇಡಿವೆ.  ಉದ್ದೇಶಪೂರ್ವಕವಾಗಿ ಹಲ್ಲೆ, ನ್ಯಾಯಾಂಗ ನಿಂದನೆ ಸೇರಿದಂತೆ ವಿವಿಧ ಪ್ರಕರಣಗಳು ಫಡ್ನಾವಿಸ್ ವಿರುದ್ಧ ದಾಖಲಾಗಿವೆ. 

ಪ್ರತಿ ಕೆ.ಜಿ. ಈರುಳ್ಳಿಗೆ 51 ಪೈಸೆ: ಫಡ್ನವೀಸ್‌ಗೆ ಹಣ ಕಳುಹಿಸಿದ ರೈತ ಮಹಾ ಸರ್ಕಾರಕ್ಕೆ 500 ಕೋಟಿ ರೂ. ಸಾಲ ಕೊಟ್ಟ ಶಿರಡಿ ಟ್ರಸ್ಟ್!