ನಾಸಿಕ್‌[ಡಿ.08]: ಈರುಳ್ಳಿ ಬೆಲೆ ತೀರಾ ಕುಸಿತ ಕಂಡಿರುವುದನ್ನು ಪ್ರತಿಭಟಿಸಿ ರೈತನೊಬ್ಬ ಈರುಳ್ಳಿ ಮಾರಾಟದಿಂದ ಬಂದ ಹಣವನ್ನು ಪ್ರಧಾನಿಗೆ ಕಳುಹಿಸಿಕೊಟ್ಟ ಬೆನ್ನಲ್ಲೆ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ರೈತನೊಬ್ಬ ಇದೇ ರೀತಿಯ ಪ್ರತಿಭಟನೆ ನಡೆಸಿದ್ದಾನೆ.

ಇದನ್ನೂ ಓದಿ: ಈರುಳ್ಳಿಗೆ ದಕ್ಕದ ಬೆಲೆ: ಒಬಾಮ ಭೇಟಿಯಾದ ರೈತನಿಂದ ಮೋದಿಗೆ MO!

ಅಂದಾರ್‌ಸೊಲ್‌ ನಿವಾಸಿಯಾದ ಚಂದ್ರಕಾಂತ್‌ ಭಿಕಾನ್‌ ದೇಶಮುಖ್‌ ಎಂಬಾತ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯಲ್ಲಿ 545 ಕೆ.ಜಿ. ಈರುಳ್ಳಿ ಮಾರಾಟ ಮಾಡಿದ್ದು, ಅದಕ್ಕೆ ಎಲ್ಲಾ ಶುಲ್ಕಗಳನ್ನು ಕಳೆದು ಅಂತಿಮವಾಗಿ ಆತನಿಗೆ 216 ರು. ದೊರೆತಿದೆ. ಅಂದರೆ ಪ್ರತಿ ಕೆ.ಜಿ. ಈರುಳ್ಳಿಗೆ 51 ಪೈಸೆ ಲಭಿಸಿದೆ. ಹೀಗಾಗಿ ಪ್ರತಿಭಟನಾರ್ಥವಾಗಿ ಈರುಳ್ಳಿ ಮಾರಾಟದಿಂದ ಬಂದ 216 ರು.ಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಇಷ್ಟು ಕಡಿಮೆ ಹಣದಲ್ಲಿ ಮನೆ ನಡೆಸಲು ಹಾಗೂ ಸಾಲ ತೀರಿಸಲು ಹೇಗೆ ಸಾಧ್ಯ ಎಂದು ಚಂದ್ರಕಾಂತ್‌ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಈರುಳ್ಳಿ ಬೆಳೆಗಾರನಿಂದ ಮೋದಿಗೆ 1064 ರು.: ಮಹಾರಾಷ್ಟ್ರಕ್ಕೆ ಸಂಕಟ!

ಈ ಹಿಂದೆ ನಿಫಾದ್‌ ತೆಹ್ಸಿಲ್‌ನ ರೈತ ಸಂಜಯ್‌ ಸಾಥೆ ಎಂಬಾತ 750 ಕೆ.ಜಿ. ಈರುಳ್ಳಿ ಮಾರಾಟ ಮಾಡಿದ್ದಕ್ಕೆ 1,064 ರು. ದೊರೆತಿದ್ದು, ಅದನ್ನು ಪ್ರಧಾನಿ ಕಚೇರಿಗೆ ಕಳುಹಿಸಿಕೊಟ್ಟಿದ್ದರು.