ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅತ್ಯಾಚಾರದ ವಿಡಿಯೊಗಳನ್ನು ನಿರ್ಬಂಧಿಸಲು ಇಂಟರ್ನೆಟ್ ಕಂಪನಿಗಳು ಮುಂದಾಗಬೇಕು ಎಂದು ಎನ್‌'ಜಿಒ ಅರ್ಜಿ ಸಲ್ಲಿಸಿತ್ತು.

ನವದೆಹಲಿ(ಡಿ.05): ಲೈಂಗಿಕ ಅಪರಾಧದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದಕ್ಕೆ ನಿರ್ಬಂಧ ಹೇರುವ ಕುರಿತು ಪ್ರತಿಕ್ರಿಯೆ ನೀಡುವಂತೆ ಇಂಟರ್ನೆಟ್ ದಿಗ್ಗಜರಾದ ಗೂಗಲ್, ಮೈಕ್ರೋಸಾಪ್ಟ್, ಯಾಹೂ ಮತ್ತು ಫೇಸ್‌'ಬುಕ್ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಲೈಂಗಿಕ ಅಪರಾಧದ ವಿಡಿಯೋಗಳ ಹಂಚಿಕೆಗೆ ನಿರ್ಬಂಧ ವಿಧಿಸಬೇಕೆಂಬ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಬಿ ಲೋಕೂರ್ ಮತ್ತು ಯು.ಯು. ಲಲಿತ್ ಅವರನ್ನೊಳಗೊಂಡ ಪೀಠ, ಜ.9ಕ್ಕೆ ಪ್ರತಿಕ್ರಿಯೆ ನೀಡುವಂತೆ ಕಂಪನಿಗಳಿಗೆ ಸೂಚನೆ ನೀಡಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅತ್ಯಾಚಾರದ ವಿಡಿಯೊಗಳನ್ನು ನಿರ್ಬಂಧಿಸಲು ಇಂಟರ್ನೆಟ್ ಕಂಪನಿಗಳು ಮುಂದಾಗಬೇಕು ಎಂದು ಎನ್‌'ಜಿಒ ಅರ್ಜಿ ಸಲ್ಲಿಸಿತ್ತು.