ನವದೆಹಲಿ (ಏ. 16): ವಿವಾದದ ಕೇಂದ್ರ ಬಿಂದುವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧರಿತ ‘ಪಿಎಂ ನರೇಂದ್ರ ಮೋದಿ’ ಚಿತ್ರವನ್ನು ವೀಕ್ಷಿಸಿ ಅದರಲ್ಲಿನ ಅಂಶಗಳನ್ನು ಆಧರಿಸಿ ತನಗೆ, ಏ.19ರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿದೆ.

ಅಭ್ಯರ್ಥಿಗಳಿಗೆ ಹೊಸ ತಲೆನೋವು: 48 ಗಂಟೆಯೊಳಗೆ ರಿವೀಲ್ ಮಾಡ್ಬೇಕು ಈ ವಿವರ!

ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಚಿತ್ರ ಬಿಡುಗಡೆ ಮಾಡದಂತೆ ಇತ್ತೀಚೆಗೆ ಚುನಾವಣಾ ಆಯೋಗ, ಚಿತ್ರದ ನಿರ್ಮಾಪಕರಿಗೆ ಸೂಚಿಸಿತ್ತು. ಈ ಆದೇಶವನ್ನು ನಿರ್ಮಾಪಕರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.  ಈ ಕುರಿತ ಅರ್ಜಿ ವಿಚಾರಣೆ ವೇಳೆ, ‘ಚುನಾವಣಾ ಆಯೋಗ, ಕೇವಲ ಚಿತ್ರದ ಟ್ರೇಲರ್‌ ವೀಕ್ಷಿಸಿ ಚಿತ್ರ ಬಿಡುಗಡೆಗೆ ನಿಷೇಧ ಹೇರಿದೆ. ನಾವು ಆಯೋಗದ ಸದಸ್ಯರಿಗೆ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲು ಸಿದ್ಧ’ ಎಂದು ನಿರ್ಮಾಪಕರ ಪರ ವಕೀಲರು ವಾದಿಸಿದರು. ಈ ವಾದ ಆಲಿಸಿದ ಆಯೋಗ, ಚಿತ್ರವನ್ನು ಪೂರ್ಣವಾಗಿ ವೀಕ್ಷಿಸಿ, ನಿಮ್ಮ ನಿರ್ಧಾರವನ್ನು ನಮಗೆ ಏ.19ರೊಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ. ಏ.22ರಂದು ನಾವು ಮತ್ತೆ ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೇಳಿತು. ಅಲ್ಲದೆ ಮುಂದಿನ ಆದೇಶದವರೆಗೂ ಚಿತ್ರವನ್ನು ಬಿಡುಗಡೆ ಮಾಡದಂತೆ ನಿರ್ಮಾಪಕರಿಗೂ ಕೋರ್ಟ್‌ ಸೂಚಿಸಿತು.