ನವದೆಹಲಿ(ಅ.04): ಕೊನೆಗೂ ಸುಪ್ರೀಂಕೋರ್ಟ್`ನಲ್ಲಿ ಕರ್ನಾಟಕದ ವಾದಕ್ಕೆ ಮನ್ನಣೆ ಸಿಕ್ಕಿದೆ. ಕೇಂದ್ರ ಅಧ್ಯಯನ ತಂಡವನ್ನ ಕಳುಹಿಸಿ ವಾಸ್ತವ ಸ್ಥಿತಿ ಬಗ್ಗೆ ಅಧ್ಯಯನ ನಡೆಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನ ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡವನ್ನ ಕಳುಹಿಸಲು ಸೂಚಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಕ್ಕೂ ಮುನ್ನ, ತಮಿಳುನಾಡಿಗೆ 6 ದಿನಗಳ ಕಾಲ ನಿತ್ಯ 6 ಸಾವಿರ ಕ್ಯೂಸೆಕ್​ ನೀರು ಬಿಡುತ್ತೇವೆ. ಹಿಂದಿನ ಆದೇಶ ಪಾಲಿಸಿ ನೀರು ಬಿಡುತ್ತೇವೆಂದು ಕರ್ನಾಟಕ ಸುಪ್ರೀಂಕೋರ್ಟ್ಗೆ ತಿಳಿಸಿತ್ತು. ಅ.6ರೊಳಗೆ ಕೋರ್ಟ್​ ಆದೇಶದಂತೆ 36 ಸಾವಿರ ಕ್ಯೂಸೆಕ್​ ನೀರು ಬಿಡುತ್ತೇವೆ. ಈಗಾಗಲೇ 9 ಸಾವಿರ ಕ್ಯೂಸೆಕ್​ ನೀರು ಬಿಟ್ಟಿದ್ದೇವೆ. ಇನ್ನೆರಡು ದಿನಗಳಲ್ಲಿ 12 ಸಾವಿರ ಕ್ಯೂಸೆಕ್​ ನೀರು ಬಿಡುತ್ತೇವೆ ಎಂದು ಸುಪ್ರೀಂಕೋರ್ಟ್​ಗೆ ಕರ್ನಾಟಕ ಸರ್ಕಾರ ಮಾಹಿತಿ ನೀಡಿತ್ತು.