ಸೆ. 21ರಿಂದ ಸೆ.27ರವರೆಗೆ ತಮಿಳುನಾಡಿಗೆ ಪ್ರತಿ ದಿನ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ

ನವದೆಹಲಿ(ಸೆ.20): ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ದಿನಕ್ಕೆ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಕರ್ನಾಟಕದ ಸ್ಥಿತಿ-ಗತಿ, ನೀರಿನ ಕೊರತೆ ಬಗ್ಗೆ 2 ಗಂಟೆಗಳ ಫಾಲಿ ನಾರಿಮನ್ ವಾದ ಮಂಡಿಸಿದರೂ ಫಲ ಸಿಗಲಿಲ್ಲ. ತಾತ್ಕಾಲಿಕ ಆದೇಶ ನೀಡಬಾರದೆಂಬ ಮನವಿಗೂ ಫಲ ಸಿಕ್ಕಿಲ್ಲ.

​ಸೆ. 21ರಿಂದ ಸೆ.27ರವರೆಗೆ ತಮಿಳುನಾಡಿಗೆ ಪ್ರತಿ ದಿನ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.7 ದಿನದಲ್ಲಿ 42 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಆದೇಶಿಸಲಾಗಿದೆ. ಮುಂದಿನ ವಿಚಾರಣೆ ಸೆ.28ಕ್ಕೆ ಮುಂದೂಡಲಾಗಿದೆ.

ಇದೇವೇಳೆ, ಕರ್ನಾಟಕ ಮೊದಲಿನಿಂದಲೂ ವಿರೋಧಿಸುತ್ತಿದ್ದ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ.