13 ವರ್ಷ ಬಾಲಕಿಯ 31 ವಾರಗಳ ಭ್ರೂಣವನ್ನು ತೆಗೆಸಿಕೊಳ್ಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ನವದೆಹಲಿ (ಸೆ.06): 13 ವರ್ಷ ಬಾಲಕಿಯ 31 ವಾರಗಳ ಭ್ರೂಣವನ್ನು ತೆಗೆಸಿಕೊಳ್ಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಬಾಲಕಿ ಮುಂಬೈಯಲ್ಲಿ ನಡೆದ ಅತ್ಯಾಚಾರ ಸಂತ್ರಸ್ಥೆ. ಆಕೆಗೆ ಮೆಡಿಕಲ್ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯವರು ಕೋರ್ಟ್ ವೈದ್ಯಕೀಯ ವರದಿ ಸಲ್ಲಿಸಿ ಬಾಲಕಿಯ ಆರೋಗ್ಯ ದೃಷ್ಟಿಯಿಂದ ಗರ್ಭಪಾತ ಮಾಡಿಸಲೇಬೇಕು ಎಂದು ಸಲಹೆ ನೀಡಿದ್ದರು. ಅದರಂತೆ ಸುಪ್ರೀಂಕೋರ್ಟ್ ಇಂದು ಅನುಮತಿ ನೀಡಿದೆ. ಕೋರ್ಟ್’ನ ತೀರ್ಪನ್ನು ಸ್ತ್ರೀತಜ್ಞ ಡಾ. ನಿಖಿಲ್ ದತಾರ್ ಸ್ವಾಗತಿಸಿದ್ದಾರೆ. ಸೆಕ್ಷನ್ 3(2) (b) ಮೆಡಿಕಲ್ ಟರ್ಮಿನೇಶನ್ ಪ್ರಗ್ನೆನ್ಸಿ ಕಾಯ್ದೆ ಪ್ರಕಾರ 20 ವಾರಗಳ ನಂತರ ಭ್ರೂಣವನ್ನು ತೆಗೆಸಲು ಕೋರ್ಟ್ ಅನುಮತಿ ನೀಡುವುದಿಲ್ಲ. ಆದರೆ ಈ ಬಾಲಕಿಯ ಆರೋಗ್ಯ ಸ್ಥಿತಿಯನ್ನು ಗಮನಿಸಿ ಅನುಮತಿ ನೀಡಿರುವುದು ಸಂತಸದ ವಿಚಾರ. ಅದೇ ರೀತಿ ಸುಪ್ರೀಂಕೋರ್ಟ್ ಎಂಟಿಪಿ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದು ಹೇಳಿದ್ದಾರೆ.
ನಾಡಿದ್ದು ಬಾಲಕಿಗೆ ಗರ್ಭಪಾತ ನಡೆಯಲಿದೆ ಎಂದು ಆಸ್ಪತ್ರೆ ತಿಳಿಸಿದೆ.
ಸುಮಾರು 10 ತಿಂಗಳ ಹಿಂದೆ ಸಂತ್ರಸ್ಥ ಬಾಲಕಿ ತನ್ನ ತಂದೆಯ ಬ್ಯುಸಿನೆಸ್ ಪಾರ್ಟ್ನರ್’ನಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದಳು. ಈಗಾಗಲೇ 31 ವಾರಗಳು ಕಳೆದಿದ್ದು ಆಕೆಗೆ ಗರ್ಬಪಾತ ಮಾಡಿಸಲು ಕೋರ್ಟ್ ಅನುಮತಿ ಕೋರಲಾಗಿತ್ತು. ಅದರಂತೆ ಸುಪ್ರೀಂಕೋರ್ಟ್ ಇಂದು ಅನುಮತಿ ನೀಡಿದೆ.
