Asianet Suvarna News Asianet Suvarna News

ಐಸಿಸ್ ಸಿದ್ದಾಂತ ಬೆಂಬಲಿಸಿದರೆ ದೇಶದ ವಿರುದ್ಧ ಯುದ್ಧ ಸಾರಿದಂತಲ್ಲ: ಹೈಕೋರ್ಟ್!

ಐಸಿಸ್ ಸಿದ್ಧಾಂತ ಬೆಂಬಲಿಸಿದರೆ ಯುದ್ಧ ಸಾರಿದಂತಲ್ಲ! ಕುತೂಹಲ ಕೆರಳಿಸಿದ ಕೇರಳ ಹೈಕೋರ್ಟ್ ತೀರ್ಪು! ಯಾಸೀನ್ ಮೊಹ್ಮದ್ ಜೈದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು! ಸಿದ್ದಾಂತ ಬೆಂಬಲಿಸುವುದಕ್ಕೂ, ಯುದ್ಧ ಸಾರುವುದಕ್ಕೂ ವ್ಯತ್ಯಾಸವಿದೆ ಎಂದ ನ್ಯಾಯಾಲಯ! ಯಾಸೀನ್ ಮೊಹ್ಮದ್ ಜೈದ್ ಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ 

Supporting IS ideology is not waging war against nation says Kerala High Court
Author
Bengaluru, First Published Oct 5, 2018, 1:33 PM IST

ಕೊಚ್ಚಿ(ಅ.5): ದೇಶದಲ್ಲಿ ಭಯಾನಕ ಐಸಿಸ್ ಸಿದ್ದಾಂತ ಹರಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಮಧ್ಯೆ ಐಸಿಸ್ ಸಿದ್ದಾಂತಕ್ಕೆ ಬಂಬಲ ನೀಡುವುದು ದೇಶದ ವಿರುದ್ಧ ಯುದ್ಧ ಸಾರಿದಂತೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.

ಕೇರಳದಲ್ಲಿ ಯುವಕರನ್ನು ಐಸಿಸ್  ಸಂಘಟನೆ ಸೇರುವಂತೆ ಪ್ರೇರೆಪಿಸುತ್ತಿದ್ದ ಆರೋಪದ ಮೇಲೆ ಎನ್ ಐಎ ಯಾಸೀನ್ ಮೊಹ್ಮದ್ ಜೈದ್ ಎಂಬಾಕೆಯನ್ನು ಬಂಧಿಸಿತ್ತು. ಅಲ್ಲದೇ ಎರ್ನಾಕುಲಂ ಎನ್ ಐಎ ವಿಶೇಷ ನ್ಯಾಯಾಲಯ ಯಾಸೀನ್ ಗೆ ಕಠಿಣ ಶಿಕ್ಷೆ ಕೂಡ ವಿಧಿಸಿತ್ತು.

ಆದರೆ ಯಾಸೀನ್ ಶಿಕ್ಷೆ ಪ್ರಮಾಣವನ್ನು ಕಡಿತಗೊಳಿಸಿರುವ ಕೇರಳ ಹೈಕೋರ್ಟ್, ಐಸಿಸ್ ಸಿದ್ದಾಂತಕ್ಕೆ ಬೆಂಬಲ ನೀಡುವುದು ದೇಶದ ವಿರುದ್ಧ ಯುದ್ಧ ಮಾಡಿದಂತೆ ಹೇಗಾಗುತ್ತದೆ ಎಂದು ಪ್ರಶ್ನಿಸಿದೆ. ಯಾಸೀನ್ ಜಿಹಾದಿ ಸಿದ್ದಾಂತವನ್ನು ಪ್ರಚುರಪಡಿಸುವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರೂ, ಆಕೆ ದೇಶದ ವಿರುದ್ಧ ಯುದ್ಧ ಸಾರಿರುವ ಕುರಿತು ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಆದರೆ ಯಾಸೀನ್‌ಳನ್ನು ಐಪಿಸಿ ಸೆಕ್ಷನ್ 120 B ಅನ್ವಯ ದೋಷಿ ಎಂದು ಪರಿಗಣಿಸಿದ್ದು, ಆಕೆಗೆ ಒಂದು ವರ್ಷದ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

Follow Us:
Download App:
  • android
  • ios