ನಿನ್ನೆ ಅವರನ್ನು ಅಮೆರಿಕಾಗೆ ಕರೆದುಕೊಂಡು ಹೋಗಲಾಗಿದೆ. ಒಮ್ಮೆ ಪೂರ್ತಿ ದೇಹ ಪರೀಕ್ಷೆಗೆ ಒಳಪಡಿಸುವುದರ ನಿಟ್ಟಿನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ.

ಬೆಂಗಳೂರು(ಅ.20): ತಮಿಳಿನ ಖ್ಯಾತ ನಟ ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೆ ಮತ್ತೆ ಅನಾರೋಗ್ಯ ಉಲ್ಬಣಿಸಿದ್ದು ಚಿಕಿತ್ಸೆ'ಗಾಗಿ ಅಮೆರಿಕಾಕ್ಕೆ ಕರೆದು ಕೊಂಡು ಹೋಗಲಾಗಿದೆ. ಚೆನ್ನೈನ ಸುತ್ತಮುತ್ತ 2.0 ಚಿತ್ರೀಕರಣದ ವೇಳೆ ರಜಿನಿ ತುಂಬ ಬಳಲಿದ್ದರು. ಹೀಗಾಗಿ ನಿನ್ನೆ ಅವರನ್ನು ಅಮೆರಿಕಾಗೆ ಕರೆದುಕೊಂಡು ಹೋಗಲಾಗಿದೆ. ಒಮ್ಮೆ ಪೂರ್ತಿ ದೇಹ ಪರೀಕ್ಷೆಗೆ ಒಳಪಡಿಸುವುದರ ನಿಟ್ಟಿನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪುತ್ರಿ ಐಶ್ವರ್ಯ ರಜನೀಕಾಂತ್ ಕೂಡ ತಂದೆಯ ಜೊತೆಯಲ್ಲಿ ತೆರಳಿದ್ದಾರೆ. ಇನ್ನು 4 ದಿನದಲ್ಲಿ ಚಿಕಿತ್ಸೆ ಪಡೆದು ರಜನೀಕಾಂತ್ ಚೆನ್ನೈಗೆ ಹಿಂತಿರುಗಲಿದ್ದಾರೆ. ಕಳೆದ ವರ್ಷ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರಜನೀಕಾಂತ್ ಅವರಿಗೆ ಸಿಂಗಾಪೂರದ ಪ್ರತಿಷ್ಠತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.