ಟುಸ್ಸಾಡ್ಸ್'ನಲ್ಲಿ ಶೀಘ್ರ ಸನ್ನಿ ಲಿಯೋನ್ ಮೇಣದ ಪ್ರತಿಮೆ

First Published 20, Jan 2018, 12:43 PM IST
Sunny Leone wax figure to be exhibited at Madame Tussauds Delhi
Highlights

ಲಂಡನ್'ನಿಂದ ಆಗಮಿಸಿರುವ ಮೇಡಮ್ ಟುಸ್ಸಾಡ್ಸ್ ತಂಡ ಸನ್ನಿ ಲಿಯೋನ್'ರನ್ನು ಮುಂಬೈನಲ್ಲಿ ಭೇಟಿ ಮಾಡಿ ಮೇಣದ ಪ್ರತಿಮೆಗಾಗಿ 200ಕ್ಕೂ ಹೆಚ್ಚು ಅಳತೆಗಳನ್ನು ಮತ್ತು ಫೋಟೋಗಳನ್ನು ಪಡೆದುಕೊಂಡಿದೆ.

ನವದೆಹಲಿ(ಜ.20): ಇಲ್ಲಿನ ಮೇಡಮ್ ಟುಸ್ಸಾಡ್ಸ್ ಮೇಣದ ಪ್ರತಿಮೆಗಳ ಮ್ಯೂಸಿಯಂನಲ್ಲಿ ಸಚಿನ್, ಅಮಿತಾಭ್ ಬಚ್ಚನ್'ರಂಥ ಖ್ಯಾತನಾಮರ ಜೊತೆ ನೀಲಿತಾರೆ ಸನ್ನಿ ಲಿಯೋನ್ ಮೇಣದ ಪ್ರತಿಮೆಯೂ ನಿರ್ಮಾಣವಾಗಲಿದೆ.

ಲಂಡನ್'ನಿಂದ ಆಗಮಿಸಿರುವ ಮೇಡಮ್ ಟುಸ್ಸಾಡ್ಸ್ ತಂಡ ಸನ್ನಿ ಲಿಯೋನ್'ರನ್ನು ಮುಂಬೈನಲ್ಲಿ ಭೇಟಿ ಮಾಡಿ ಮೇಣದ ಪ್ರತಿಮೆಗಾಗಿ 200ಕ್ಕೂ ಹೆಚ್ಚು ಅಳತೆಗಳನ್ನು ಮತ್ತು ಫೋಟೋಗಳನ್ನು ಪಡೆದುಕೊಂಡಿದೆ.

ಡೆಲ್ಲಿಯಲ್ಲಿರುವ ಇತರ ಮೇಡಮ್ ಟುಸ್ಸಾಡ್ಸ್ ಮೇಣದ ಪ್ರತಿಮೆಗಳೆಂದರೆ, ಕತ್ರೀನಾ ಕೈಫ್, ಮಾಧುರಿ ದೀಕ್ಷಿತ್, ಕರೀನಾ ಕಫೂರ್ ಖಾನ್, ಸಲ್ಮಾನ್ ಖಾನ್, ವಿಲ್ ಸ್ಮಿತ್, ಜಸ್ಟೀನ್ ಬೈಬರ್, ಆಶಾ ಭೋಸ್ಲೆ, ಎ.ಪಿ.ಜೆ ಅಬ್ದುಲ್ ಕಲಾಂ, ರಣ್ಬೀರ್ ಕಪೂರ್ ಇತ್ಯಾದಿ.

loader