ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ ಇದೀಗ ದುರ್ಗವತಿಯಾಗಿ ಬದಲಾಗಿದ್ದಾಳೆ. ಹೌದು ಉತ್ತರ ಪ್ರದೇಶದ ಮತದಾರರ ಪಟ್ಟಿಯಲ್ಲಿ ಸನ್ನಿ ಲಿಯೋನ್, ಆನೆ , ಪಾರಿವಾಳಗಳ ಫೊಟೊಗಳು ಕಂಡು ಬಂದಿವೆ. 

ವಾರಣಾಸಿ: ಲೋಕಸಭಾ ಚುನಾವಣೆ ಹತ್ತಿರಬರುತ್ತಿದೆ. ಇಂತ ಹೊತ್ತಿನಲ್ಲೇ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಮತದಾರರ ಪರಿಷ್ಕೃತ ಪಟ್ಟಿಯಲ್ಲಿ ಬಾಲಿವುಡ್‌ ನಟಿ ಸನ್ನಿ ಲಿಯೋನ್‌, ಪಾರಿವಾಳ ಮತ್ತು ಜಿಂಕೆ ಚಿತ್ರಗಳೂ ಕಾಣಿಸಿಕೊಂಡಿವೆ.

ಇಲ್ಲಿನ ವಿವೇಕಾನಂದ ಕಾಲೊನಿಯ ಮತದಾರ ಪಟ್ಟಿಯಲ್ಲಿರುವ ದುರ್ಗಾವತಿ ಸಿಂಗ್‌ರ ಸ್ಥಾನದಲ್ಲಿ ಸನ್ನಿ ಲಿಯೋನ್‌ ಫೋಟೋ ಕಾಣಿಸಿಕೊಂಡಿದೆ.

ಮಾಜಿ ಸಚಿವ ನಾರದ ರಾಯ್‌ ಹೆಸರಿನ ಮುಂದೆ ಆನೆಯ ಚಿತ್ರ ಹಾಕಲಾಗಿದ್ದರೆ, ಕುನ್ವರ್‌ ಅಂಕುರ್‌ ಸಿಂಗ್‌ ಎಂಬವರ ಹೆಸರಿನಲ್ಲಿ ಜಿಂಕೆಯ ಫೋಟೊ ಇದೆ. ಪರಿಷ್ಕೃತ ಪಟ್ಟಿಯಲ್ಲಿರುವ ದೋಷಗಳಿಂದ ಮುಜುಗರಕ್ಕೀಡಾಗಿರುವ ಬಲ್ಲಿಯಾ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.