ಮತದಾರರು ಡಿಯೋಲ್‌ ಅವರನ್ನು ಸಂಸದರನ್ನಾಗಿ ಆರಿಸಿದ್ದಾರೆ. ಡಿಯೋಲ್‌ ಅವರ ಪ್ರತಿನಿಧಿಯನ್ನಲ್ಲ| ಸರ್ಕಾರಿ ಕಾರ‍್ಯಕ್ರಮಕ್ಕೆ ತಮ್ಮ ಪರ ಪ್ರತಿನಿಧಿ ನೇಮಿಸಿದ ಸನ್ನಿ ಡಿಯೋಲ್‌: ವಿವಾದ| 

ಗುರುದಾಸ್‌ಪುರ[ಜು.02]: ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಸಂಸದ ಹಾಗೂ ಹಾಗೂ ಬಾಲಿವುಡ್‌ ನಟ ಸನ್ನಿ ಡಿಯೋಲ್‌ ಅವರು ಲೇಖಕರೊಬ್ಬರನ್ನು ತಮ್ಮ ಪ್ರತಿನಿಧಿಯನ್ನಾಗಿ ನೇಮಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಸೋಮವಾರ ಪ್ರಕಟಣೆ ಹೊರಡಿಸಿರುವ ಸಂಸದ ಡಿಯೋಲ್‌ ಅವರು, ‘ಗುರುಪ್ರೀತ್‌ ಸಿಂಗ್‌ ಅವರನ್ನು ಗುರುದಾಸ್‌ಪುರ ಕ್ಷೇತ್ರಕ್ಕೆ ತನ್ನ ಪ್ರತಿನಿಧಿಯಾಗಿ ನೇಮಿಸಿಕೊಂಡಿದ್ದೇನೆ. ನನ್ನ ಪರವಾಗಿ ಸಭೆ ಹಾಗೂ ಮುಖ್ಯವಾದ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ, ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಂಜಾಬ್‌ ಸಚಿವ ಹಾಗೂ ಕಾಂಗ್ರೆಸ್‌ ನಾಯಕ ಸುಖಿಂದರ್‌ ಸಿಂಗ್‌ ರಂಧಾವಾ, ‘ಡಿಯೋಲ್‌ ಅವರು ತಮ್ಮ ಕ್ಷೇತ್ರಕ್ಕೆ ಪ್ರತಿನಿಧಿಯೊಬ್ಬರನ್ನು ನೇಮಿಸಿಕೊಳ್ಳುವ ಮೂಲಕ ಜನಾದೇಶಕ್ಕೆ ದ್ರೋಹ ಬಗೆದಿದ್ದಾರೆ. ಓರ್ವ ಸಂಸದ ಹೇಗೆ ತನ್ನ ಪ್ರತಿನಿಧಿಯನ್ನು ನೇಮಿಸಿಕೊಳ್ಳುತ್ತಾರೆ. ಮತದಾರರು ಡಿಯೋಲ್‌ ಅವರನ್ನು ಸಂಸದರನ್ನಾಗಿ ಆರಿಸಿದ್ದಾರೆ. ಡಿಯೋಲ್‌ ಅವರ ಪ್ರತಿನಿಧಿಯನ್ನಲ್ಲ’ ಎಂದು ಕಿಡಿಕಾರಿದ್ದಾರೆ.