Asianet Suvarna News Asianet Suvarna News

ಮೈಸೂರಿನಲ್ಲಿ ಸಚಿವ ಮಹದೇವಪ್ಪ ಪುತ್ರನ ಬಾಡೂಟ ರಾಜಕೀಯ?

ವಿಧಾನಸಭೆ ಚುನಾವಣೆಗೆ ಇನ್ನೂ ಹಲವು ದಿನಗಳು ಬಾಕಿ ಇರುವಾಗಲೇ ಮೈಸೂರಿನಲ್ಲಿ ಚುನಾವಣೆ ಕಣ ರಂಗೇರಿದೆ.

Sunil Bose Organises Grand Lunch For Workers
  • Facebook
  • Twitter
  • Whatsapp

ಮೈಸೂರು: ವಿಧಾನಸಭೆ ಚುನಾವಣೆಗೆ ಇನ್ನೂ ಹಲವು ದಿನಗಳು ಬಾಕಿ ಇರುವಾಗಲೇ ಮೈಸೂರಿನಲ್ಲಿ ಚುನಾವಣೆ ಕಣ ರಂಗೇರಿದೆ.

ಲೋಕೋಪಯೋಗಿ ಸಚಿವ ಮಹದೇವಪ್ಪ ಪುತ್ರ ಸುನೀಲ್​ ಬೋಸ್​ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕೈ ಕಾರ್ಯಕರ್ತರಿಗೆ ಹಾಗೂ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ.

ನಂಜನಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿರುವ ಸುನೀಲ್​ ಬೋಸ್​ ಕಾಂಗ್ರೆಸ್​ ಕಾರ್ಯಕರ್ತರನ್ನು ಸೆಳೆಯಲು ಸುಮಾರು 5ಸಾವಿರ ಮಂದಿಗೆ ಬಾಡೂಟ ಹಾಕಿ’, ‘ಸಂತೃಪ್ತಗೊಳಿಸುವ’ ಪ್ರಯತ್ನ ಮಾಡಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬರ್ತಡೇ ಹೆಸರಿನಲ್ಲಿ ಮತದಾರರನ್ನು ಹಿಡಿದಿಡುವ ತಂತ್ರ ಇದಾಗಿದೆ ಎಂಬ ಅಭಿಪ್ರಾಯಯಗಳೂ  ಕೇಳಿಬಂದಿವೆ. ಇತ್ತೀಚಿನ ದಿನಗಳಲ್ಲಿ ಬೋಸ್ ಈ ರೀತಿ ಭರ್ಜರಿ ಭೋಜನ ವ್ಯವಸ್ಥೆ ಮಾಡಿಸುತ್ತಿರುವುದು ಎರಡನೇ ಬಾರಿಯಾಗಿದೆ. ಚಾಮುಂಡೇಶ್ವರಿಗೆ ಮಾಡಿರುವ ಹರಕೆಯನ್ನು ತೀರಿಸಲು ಕಳೆದ 10 ವರ್ಷಗಳಿಂದ ಈ ರೀತಿ ಭೋಜನ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ

Follow Us:
Download App:
  • android
  • ios