2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೂ ಮುನ್ನವೇ ಹೊಸ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರ ನೇಮಕವಾಗಿದೆ. ಹಾಗಾದ್ರೆ ನೂತನ ಮುಖ್ಯ ಚುನಾವಣಾ ಅಧಿಕಾರಿ ಯಾರು? 

ನವದೆಹಲಿ, [ನ.26]: ಸುನೀಲ್ ಅರೋರಾ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಇಂದು [ಸೋಮವಾರ] ಆದೇಶ ಹೊರಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅರೋರಾ ಅವರು ಡಿಸೆಂಬರ್ 2ನೇ ತಾರೀಕು ಅಧಿಕಾರ ಸ್ವೀಕಾರ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ. ಈವರೆಗೆ ಮುಖ್ಯ ಚುನಾವಣಾ ಆಯುಕ್ತರಾಗಿ ಒ.ಪಿ.ರಾವತ್ ಕಾರ್ಯ ನಿರ್ವಹಿಸಿದ್ದರು. 

ನಿವೃತ್ತ ಐಎಎಸ್ ಅಧಿಕಾರಿ ಆಗಿರುವ ಸುನೀಲ್ ಅರೋರಾ 1980ರ ಬ್ಯಾಚ್ ಗೆ ಸೇರಿದವರು. ಅರೋರಾ ಅವರು ಬಿಎ ಪದವೀಧರರು, ಪಂಜಾಬ್ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ. ಮಾಡಿದ್ದಾರೆ.

 ಐಎಎಸ್ ಅಧಿಕಾರಿ ಆಗುವ ಮುನ್ನ ಅವರು ಜಲಂಧರ್ ನ ಡಿಎವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.