ಕಾರ್ಕಳ ಕ್ಷೇತ್ರದ ಸುನೀಲ್ ಕುಮಾರ್‍ ನನ್ನ ಕ್ಷೇತ್ರ ಬಂಟ್ವಾಳದಲ್ಲಿ ವೃಥಾ ಆರೋಪ ಮಾಡಿದ್ದಾರೆ. ಬಂಟ್ವಾಳ ಕ್ಷೇತ್ರದ ಚುನಾವಣೆ ರಾಜೇಶ್ ನಾಯಕ್ ರಮಾನಾಥ್ ರೈ ನಡುವೆ ಅಲ್ಲ ರಾಮ ಮತ್ತು ಅಲ್ಲಾ ನಡುವೆ ಚುನಾವಣೆ ಎಂದು ಕನಿಷ್ಟ ಜ್ಙಾನ ಇಲ್ಲದ ಸುನಿಲ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ ಎಂದು ರಮಾನಾಥ್ ರೈ ಪ್ರತಿಕ್ರಿಯಿಸಿದ್ದಾರೆ.
ಉಡುಪಿ (ಜ.25): ಕಾರ್ಕಳ ಕ್ಷೇತ್ರದ ಸುನೀಲ್ ಕುಮಾರ್ ನನ್ನ ಕ್ಷೇತ್ರ ಬಂಟ್ವಾಳದಲ್ಲಿ ವೃಥಾ ಆರೋಪ ಮಾಡಿದ್ದಾರೆ. ಬಂಟ್ವಾಳ ಕ್ಷೇತ್ರದ ಚುನಾವಣೆ ರಾಜೇಶ್ ನಾಯಕ್ ರಮಾನಾಥ್ ರೈ ನಡುವೆ ಅಲ್ಲ ರಾಮ ಮತ್ತು ಅಲ್ಲಾ ನಡುವೆ ಚುನಾವಣೆ ಎಂದು ಕನಿಷ್ಟ ಜ್ಙಾನ ಇಲ್ಲದ ಸುನಿಲ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ ಎಂದು ರಮಾನಾಥ್ ರೈ ಪ್ರತಿಕ್ರಿಯಿಸಿದ್ದಾರೆ.
ದೇವರು ಒಬ್ಬನೇ ಎಂದು ನಾನು ತಿಳಿದುಕೊಂಡಿದ್ದೇನೆ. ದೇವರ ಮೇಲೆ ನಂಬಿಕೆ ಗೌರವ ಇದ್ದವರು ಸಣ್ಣ ಮಾತು ಆಡಬಾರದು. ಬಿಜೆಪಿ ಈ ರೀತಿಯ ಪ್ರಚೋದನಾಕಾರಿ ಹೇಳಿಕೆಗೆ ಅವಕಾಶ ನೀಡಿರುವುದು ಸಮಾಜಕ್ಕೆ ಅವಮಾನ. ಮತೀಯ ಸೂಕ್ಷ್ಮ ಪ್ರದೇಶದಲ್ಲಿ ಪ್ರಚೋದನೆ ನೀಡುವ ಹೇಳಿಕೆ ಎಷ್ಟು ಸರಿ? ಎಂದು ರಮಾನಾಥ್ ರೈ ಪ್ರಶ್ನಿಸಿದ್ದಾರೆ.
ಸುನಿಲ್ ಕುಮಾರ್ ಮನಸಲ್ಲಿ ಮತೀಯ ವಿಚಾರವೇ ತುಂಬಿದೆ. ಹುಲಿಯೋಜನೆ ಹೆಸರಲ್ಲಿ ಭಯ ಹುಟ್ಟಿಸಿ ಸುಳ್ಳು ಹೇಳಿ ಶಾಸಕರಾದವರು. ಜೋಳಿಗೆ ಹಿಡಿದು ಬಂದವರು ಎಷ್ಟು ಸ್ವತ್ತು ಸಂಪತ್ತು ಮಾಡಿದ್ದಾರೆಂದು ನಂಗೆ ಗೊತ್ತು. ನನ್ನನ್ನು ಮತೀಯವಾದಿ, ಜಾತಿವಾದಿ ಎಂದು ಯಾರು ಕರೆದಿಲ್ಲ. ಧರ್ಮದ ಹೆಸರಲ್ಲಿ, ದೇವರ ಹೆಸರಲ್ಲಿ ರಾಜಕೀಯ ಮಾಡುವ ಸುನಿಲ್ ಕುಮಾರ್ ಚುನಾವಣೆ ಬಂದಾಗ ನನ್ನ ಕ್ಷೇತ್ರದಲ್ಲಿ ಮತೀಯ ವಿಚಾರ ಎತ್ತಿರುವುದು ಸರಿಯಲ್ಲ. ಸುನೀಲ್ ಕುಮಾರ್ ನನ್ನ ಜಾತ್ಯಾತೀತ ನಿಲುವು ಪ್ರಶ್ನಿಸುತ್ತಿದ್ದಾರೆ. ನನ್ನನ್ನು ಸುನಿಲ್ ಕುಮಾರ್ ಏನೂ ಮಾಡಲು ಆಗಲ್ಲ ಎಂದು ಕಾರ್ಕಳದಲ್ಲಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
