ಏಮ್ಸ್‌ ಮತ್ತು ಅಮೆರಿಕದ ಎಫ್‌ಬಿಐ ಸಿದ್ಧಪಡಿಸಿರುವ ವೈದ್ಯಕೀಯ ವರದಿಯನ್ನು ಅಧ್ಯಯನ ಮಾಡಿದ ವೈದ್ಯಕೀಯ ಮಂಡಳಿಯು ವರದಿಯಲ್ಲಿ ‘ ಸುನಂದಾ ಸಾವಿಗೆ  ಕಾರಣ ಎನು ಎಂದು  ಸರಿಯಾದ ನಿರ್ಣಯವನ್ನ ನೀಡಿಲ್ಲ’

ಕಾಂಗ್ರೆಸ್ ಮುಖಂಡ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವಿನ ಕಾರಣ ಪತ್ತೆಗೆ ರಚಿಸಲಾಗಿದ್ದ ವೈದ್ಯಕೀಯ ಮಂಡಳಿಯು ದೆಹಲಿ ಪೊಲೀಸರಿಗೆ ಸಲ್ಲಿಸಿರುವ ವರದಿಯಲ್ಲಿ ಸ್ಪಷ್ಟ ತೀರ್ಮಾನ ತಿಳಿಸಿಲ್ಲ. ಏಮ್ಸ್‌ ಮತ್ತು ಅಮೆರಿಕದ ಎಫ್‌ಬಿಐ ಸಿದ್ಧಪಡಿಸಿರುವ ವೈದ್ಯಕೀಯ ವರದಿಯನ್ನು ಅಧ್ಯಯನ ಮಾಡಿದ ವೈದ್ಯಕೀಯ ಮಂಡಳಿಯು ವರದಿಯಲ್ಲಿ ‘ ಸುನಂದಾ ಸಾವಿಗೆ ಕಾರಣ ಎನು ಎಂದು ಸರಿಯಾದ ನಿರ್ಣಯವನ್ನ ನೀಡಿಲ್ಲ’ ಎಂದು ದೆಹಲಿ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ ತಿಳಸಿದೆ. ವೈದ್ಯಕೀಯ ಮಂಡಳಿಯಲ್ಲಿ ದೆಹಲಿ, ಚಂಡೀಗಡ ಮತ್ತು ಪುದುಚೇರಿ ವೈದ್ಯರು ಇದ್ದರು. ಸುನಂದಾ ಅವರ ಮೊಬೈಲ್ ಫೋನ್‌ನಿಂದ ಅಳಿಸಲಾಗಿರುವ ಸಂದೇಶಗಳನ್ನು ಪುನಃ ಪಡೆಯುವ ಪ್ರಕ್ರಿಯೆಗೆ ಕಾಯಲಾಗುತ್ತಿದೆ.