ಸನ್ ಟೀವಿ ನೆಟ್'ವರ್ಕ್ ಪರವಾನಗಿ ಪ್ರಶ್ನಿಸಿ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸರ್ಕಾರಕ್ಕೆ ನೋಟಿಸ್ ಕಳುಹಿಸಿದೆ.

ನವದೆಹಲಿ (ನ.28): ಸನ್ ಟೀವಿ ನೆಟ್'ವರ್ಕ್ ಪರವಾನಗಿ ಪ್ರಶ್ನಿಸಿ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸರ್ಕಾರಕ್ಕೆ ನೋಟಿಸ್ ಕಳುಹಿಸಿದೆ.

ಗೃಹ ಇಲಾಖೆಯ ವಿರೋಧದ ನಡುವೆಯೂ ಸನ್ ಟಿವಿ ಗೆ ಪರವಾನಗಿ ನೀಡಲಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಅರ್ಜಿಯಲ್ಲಿ ಹೇಳಿದ್ದರು. ಇಂದು ಇದರ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಭದ್ರತಾ ಪರವಾನಗಿಯನ್ನು ಮರುಪರಿಶೀಲಿಸುವ ಕುರಿತು ಎಂದು ಸರ್ಕಾರಕ್ಕೆ ನೋಟಿಸ್ ನೀಡಿದೆ.

ಗೃಹ ಸಚಿವಾಲಯ ಪರವಾನಗಿ ನೀಡದಿದ್ದರಿಂದ ಕಳೆದ ವರ್ಷ ಮಾಹಿತಿ ಮತ್ತು ಪ್ರಸಾರ ಸಚಿವಾಲ ಎಫ್ ಎಂ ಮೂರನೇ ಹಂತದ ಹರಾಜು ಪ್ರಕ್ರಿಯೆ ನಡೆಸಿದ ಸಂದರ್ಭದಲ್ಲಿ ಸನ್ ಟಿವಿ ಭಾಗವಾಗಿರುವ ರೆಡ್ ಎಫ್.ಎಂ ಭಾಗವಹಿಸಲು ಅನುಮತಿ ನೀಡಿರಲಿಲ್ಲ. ಆಗ ಸನ್ ಟೀವಿ ದೆಹಲಿ ಹೈ ಕೋರ್ಟ್ ಮೆಟ್ಟಿಲೇರಿ ಅನುಮತಿ ಪಡೆದು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿತ್ತು. ದೆಹಲಿ ಕೋರ್ಟ್ ಆದೇಶ ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿತು. ಇದನ್ನು ಕೂಡಾ ಸುಪ್ರೀಂ ವಜಾಗೊಳಿಸಿದೆ.