ಪಿಯು ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ 18ರಿಂದ

First Published 11, Mar 2018, 8:35 AM IST
Summer Holiday Begins From March 18
Highlights

ಪದವಿಪೂರ್ವ ಶಿಕ್ಷಣ ಇಲಾಖೆಯ 2017-18ನೇ ಸಾಲಿನ ಶೈಕ್ಷಣಿಕ ಸಾಲಿನ ಕಾರ್ಯ ಚಟುವಟಿಕೆಗಳು ಪೂರ್ಣಗೊಂಡಿದ್ದು, ಪರಿಷ್ಕೃತ ವೇಳಾಪಟ್ಟಿಪ್ರಕಾರ ಪಿಯುಸಿ ವಿದ್ಯಾರ್ಥಿಗಳಿಗೆ ಮಾ.18ರಿಂದ ಬೇಸಿಗೆ ರಜೆ ನೀಡಲಾಗುತ್ತಿದೆ ಎಂದು ಪಿಯು ಇಲಾಖೆ ಪ್ರಕಟಿಸಿದೆ.

ಬೆಂಗಳೂರು :  ಪದವಿಪೂರ್ವ ಶಿಕ್ಷಣ ಇಲಾಖೆಯ 2017-18ನೇ ಸಾಲಿನ ಶೈಕ್ಷಣಿಕ ಸಾಲಿನ ಕಾರ್ಯ ಚಟುವಟಿಕೆಗಳು ಪೂರ್ಣಗೊಂಡಿದ್ದು, ಪರಿಷ್ಕೃತ ವೇಳಾಪಟ್ಟಿಪ್ರಕಾರ ಪಿಯುಸಿ ವಿದ್ಯಾರ್ಥಿಗಳಿಗೆ ಮಾ.18ರಿಂದ ಬೇಸಿಗೆ ರಜೆ ನೀಡಲಾಗುತ್ತಿದೆ ಎಂದು ಪಿಯು ಇಲಾಖೆ ಪ್ರಕಟಿಸಿದೆ.

ಈ ಮೊದಲಿನ ವಾರ್ಷಿಕ ವೇಳಾಪಟ್ಟಿಪ್ರಕಾರ ಕೆಲಸದ ಕೊನೆಯ ದಿನ ಮಾ.20 ಆಗಿತ್ತು. ಪರೀಕ್ಷೆಗಳು ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದ ಕೆಲಸಕ್ಕೆ ಮಾ.19 ಕೊನೆಯ ದಿನವಾಗಿದೆ. ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಮಾ.17ರಂದು ಪರೀಕ್ಷೆ ಮುಗಿಯಲಿದೆ.

ಮಾ.18ರಿಂದ ಬೇಸಿಗೆ ನೀಡಲಾಗುತ್ತಿದೆ. ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಮಾ.19ರಂದು ಫಲಿತಾಂಶ ಪ್ರಕಟಿಸಿ ಅಂದಿನಿಂದಲೇ ರಜೆ ನೀಡಲಾಗುತ್ತದೆ. 2018-19ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭದ ದಿನಗಳನ್ನು ನಂತರ ತಿಳಿಸುವುದಾಗಿ ಪಿಯು ಇಲಾಖೆ ಪ್ರಕಟಣೆ ಹೊರಡಿಸಿದೆ.

loader