Asianet Suvarna News Asianet Suvarna News

'ಮಾತಿನಂತೆ ಜಮೀನು ದಾನ ಮಾಡಿದ್ದೇನೆ, ಯಾವ ಷರತ್ತೂ ಹಾಕಿಲ್ಲ'

ಯೋಧ ಗುರು ಪತ್ನಿಗೆ ಸುಮಲತಾ ಅರ್ಧ ಎಕರೆ ದಾನ| ದಾಖಲೆ ಹಸ್ತಾಂತರಿಸಿದ ಅಂಬರೀಷ್‌ ಪತ್ನಿ| ಶೀಘ್ರದಲ್ಲೇ ನೋಂದಣಿ ಮಾಡಿಕೊಡುವೆ

Sumalatha Hands Over Documents Of 20 Guntas Land to Pulwama Martyr H Guru s Family
Author
Mandya, First Published Mar 5, 2019, 5:14 PM IST

ಮಂಡ್ಯ[ಮಾ.05]: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದ ಮಂಡ್ಯ ಜಿಲ್ಲೆ ಮದ್ದೂರಿನ ಸಿಆರ್‌ಪಿಎಫ್‌ ಯೋಧ ಎಚ್‌. ಗುರು ಕುಟುಂಬಕ್ಕೆ ಮಾಜಿ ಸಚಿವ ದಿ. ಅಂಬರೀಷ್‌ ಪತ್ನಿ ಸುಮಲತಾ ಅವರು ಈ ಹಿಂದೆ ಕೊಟ್ಟಮಾತಿನಂತೆ 20 ಗುಂಟೆ ಜಮೀನು ದೇಣಿಗೆ ಕೊಟ್ಟಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸೋಮವಾರ ಹಸ್ತಾಂತರಿಸಿದ್ದಾರೆ.

ಹುತಾತ್ಮ ಯೋಧ ಗುರು ಪತ್ನಿಗೆ ಉಚಿತ ಆರೋಗ್ಯ ವಿಮೆ

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸುಮಲತಾ ಅವರು ಹುತಾತ್ಮ ಯೋಧನ ಕುಟುಂಬಕ್ಕೆ ಈ ದಾನಪತ್ರವನ್ನು ನೀಡಿದರು. ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಜಮೀನು ಅಂಬರೀಷ್‌ ಅವರಿಗೆ ಪಿತ್ರಾರ್ಜಿತವಾಗಿ ಬಂದಿತ್ತು. ಈ ಜಮೀನನ್ನು ಅಂಬರೀಷ್‌ ತಮ್ಮ ಪುತ್ರ ಅಭಿಷೇಕ್‌ಗೆ ಪಾಲು ಮಾಡಿ ಖಾತೆ ಮಾಡಿಕೊಟ್ಟಿದ್ದರು. ಈಗ ಅದರಲ್ಲಿ 20 ಗುಂಟೆಯಷ್ಟುಜಾಗವನ್ನು ಹುತಾತ್ಮ ಯೋಧನ ಪತ್ನಿ ಹೆಸರಿಗೆ ಸುಮಲತಾ ಅವರು ದಾನಪತ್ರ ಮಾಡಿಸಿದ್ದಾರೆ.

ಯಾವ ಷರತ್ತೂ ಹಾಕಿಲ್ಲ:

ನಂತರ ಮಾತನಾಡಿದ ಸುಮಲತಾ, ನಾನು ಈ ಹಿಂದೆ ಹೇಳಿದಂತೆ ಜಮೀನು ದಾನ ಮಾಡಿದ್ದೇನೆ. ಮುಂದಿನ ದಿನ​ಗ​ಳಲ್ಲಿ ಕುಟುಂಬ​ದ​ವರ ನಿರ್ಧಾ​ರ​ದಂತೆ ನೋಂದಣಿ ಮಾಡಿ​ಕೊ​ಡು​ತ್ತೇವೆ. ಅದ​ರಲ್ಲಿ ಸ್ಮಾರಕ ಮಾಡ್ತಾರೋ, ವ್ಯವ​ಸಾಯ ಮಾಡ್ತಾರೋ ಎನ್ನುವುದು ಅವರಿಗೆ ಬಿಟ್ಟವಿಚಾರ ಎಂದರು.

15 ಕೋಟಿ ಬಂದಿಲ್ಲ, ಕಿತ್ತಾಟವೂ ನಡೆದಿಲ್ಲ: ಯೋಧ ಗುರು ಪತ್ನಿ

ಜಮೀ​ನಿಗೆ ಸಂಬಂಧಿ​ಸಿ ಯಾವುದೇ ಷರ​ತ್ತನ್ನೂ ಹಾಕಿಲ್ಲ. ಜಮೀ​ನ​ನ್ನು ಅವ​ರಿಗೆ ನೀಡಿದ ಬಳಿಕ ಅದರ ಮೇಲೆ ನನಗೆ ಯಾವುದೇ ಅಧಿ​ಕಾ​ರ​ವಿ​ಲ್ಲ. ಅವ​ರಿಗೆ ಯಾವ ರೀತಿ ಅನು​ಕೂ​ಲ​ವಾ​ಗುತ್ತದೋ ಅದ​ರಂತೆ ಬಳ​ಸಿ​ಕೊ​ಳ್ಳಲಿ. ನೋವಿ​ನ​ಲ್ಲಿ​ರುವ ಕುಟುಂಬ​ದ​ವ​ರಿಗೆ ಈ ಜಮೀ​ನನ್ನು ಇದೇ ಉದ್ದೇ​ಶಕ್ಕೆ ಬಳ​ಸಿ​ಕೊ​ಳ್ಳು​ವಂತೆ ಒತ್ತಡ ಹೇರು​ವು​ದಿಲ್ಲ ಎಂದು ನುಡಿ​ದರು.

Follow Us:
Download App:
  • android
  • ios