ಹುತಾತ್ಮ ಯೋಧ ಗುರು ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ವಿಮಾ ಕಂಪನಿ | ಯೋಧ ಗುರು ಪತ್ನಿಗೆ ಉಚಿತ ಆರೋಗ್ಯ ವಿಮೆ | ದೇಶದಾದ್ಯಂತ ಇರುವ 8400 ಆಸ್ಪತ್ರೆ, ಕರ್ನಾಟಕದಲ್ಲಿರುವ 500 ಆಸ್ಪತ್ರೆಗಳಲ್ಲಿ ಕಲಾವತಿಗೆ ಉಚಿತ ಚಿಕಿತ್ಸೆ
ಮಂಡ್ಯ (ಮಾ. 04): ಪುಲ್ವಾಮಾ ದಾಳಿಯಲ್ಲಿ ಹುತಾತ್ಮನಾದ ಯೋಧ ಗುರು ಕುಟುಂಬದ ಆರೋಗ್ಯದ ಬಗ್ಗೆ ವಿಮಾ ಪ್ರತಿನಿಧಿಗಳು ಕಾಳಜಿ ವಹಿಸಿದ್ದಾರೆ. ಯೋಧ ಗುರು ಪತ್ನಿ ಕಲಾವತಿಯವರಿಗೆ ಉಚಿತ ಆರೋಗ್ಯ ವಿಮೆ ನೀಡಿದ್ದಾರೆ.
23 ಹುತಾತ್ಮ CRPF ಯೋಧರ ಸಾಲ ಮನ್ನಾ ಮಾಡಿದ SBI: ವಿಮೆಯೂ ಪಾಸ್
ಭಾರತೀಯ ವಿಮಾ ಪಾಲಿಸಿದಾರರ ಕ್ಷೇಮಾಭಿವೃದ್ಧಿ ದತ್ತಿ ಸಂಸ್ಥೆಯಿಂದ ಸಂಸ್ಥೆ ಅಧ್ಯಕ್ಷ ಡಾ. ಡಿ ಸಿ ಶ್ರೀಧರ್ ವಿಮೆ ಕಾರ್ಡ್ ವಿತರಣೆ ಮಾಡಿದ್ದಾರೆ.
ಕಲಾವತಿಯವರಿಗೆ 5 ಲಕ್ಷವರೆಗಿನ ಆರೋಗ್ಯ ವಿಮೆಯನ್ನು ನೀಡಲಾಗಿದೆ. ಸ್ಟಾರ್ ಹೆಲ್ತ್ ಇನ್ಷೂರೆನ್ಸ್ ಕಂಪನಿಯ ವ್ಯಾಪ್ತಿಗೆ ಬರುವ ದೇಶದಾದ್ಯಂತ ಇರುವ 8400 ಆಸ್ಪತ್ರೆ, ಕರ್ನಾಟಕದಲ್ಲಿರುವ 500 ಆಸ್ಪತ್ರೆಗಳಲ್ಲಿ ಕಲಾವತಿಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.
ಯಾವುದೇ ದಾಖಲೆ ಕೇಳದೆ ಹುತಾತ್ಮ ಯೋಧನ ಹಣ ನೀಡಿದ LIC
ಪುಲ್ವಾಮಾ ದಾಳಿಯಲ್ಲಿ ಗುರು ಹುತಾತ್ಮರಾದ ವಿಚಾರ ತಿಳಿಯುತ್ತಿದ್ದಂತೆ ಯಾವುದೇ ದಾಖಲೆ ಕೇಳದೇ ಎಲ್ ಐಸಿ ವಿಮೆ ಮರಣದಾವೆ ಮೊತ್ತ ತಲುಪಿಸಿ ಮಾನವೀಯತೆ ಮೆರೆದಿತ್ತು.
