ಏಕ ಶ್ರೇಣಿ ಏಕ ರೀತಿಯ ಪಿಂಚಣಿ  ಯೋಜನೆಯ ಅನುಷ್ಠಾನದಲ್ಲಿನ ವಿಳಂಬಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮಾಜಿ ಸೈನಿಕ ಗ್ರೇವಾಲ್‌ ಅವರ ಕುಟುಂಬಕ್ಕೆ ಸಿಎಂ ಅರವಿಂದ ಕೇಜ್ರಿವಾಲ್‌ 1 ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ.  ಹರಿಯಾಣದ ಭಿವಾನಿಯಲ್ಲಿನ ನಿವಾಸಕ್ಕೆ ತೆರಳಿ ಅವರ ಶೋಕತಪ್ತ ಕುಟುಂಬ ಸದಸ್ಯರನ್ನು ಭೇಟಿಯಾಗಿ ಬಳಿಕ ಗ್ರೇವಾಲ್‌ ಅವರ ಅಂತ್ಯಕ್ರಿಯೆಯಲ್ಲೂ ಭಾಗಿಯಾದರು. ಗ್ರೇವಾಲ್‌ ಕುಟುಂಬದವರಿಗೆ ಸಾಂತ್ವನ ಹೇಳಿದ ಕೇಜ್ರಿವಾಲ್‌, ಮೃತ ಯೋಧನ ಕುಟುಂಬದವರನ್ನು ಪ್ರಧಾನಿ ಮೋದಿ ಭೇಟಿಯಾಗಬೇಕಿತ್ತು; ಯಾವ ದರ್ಪದ ಮನೋಭಾವದಿಂದಾಗಿ ಕಾಂಗ್ರೆಸ್‌ ಪಕ್ಷ ಅಧಿಕಾರದಿಂದ ಕೆಳಗಿಳಿಯಿತೋ ಅದೇ ದರ್ಪದ ಫ‌ಲವಾಗಿ ಬಿಜೆಪಿ ಕೂಡ ಅಧಿಕಾರದಿಂದ ಕೆಳಗಿಳಿಯಲಿದೆ ಎಂದು ಹೇಳುವ ಮೂಲಕ ಕೇಜ್ರಿವಾಲ್‌, ಓಆರ್‌ಓಪಿ ರಾಜಕೀಯದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುವ ಕೆಲಸ ಮಾಡಿದರು.