‘ರಾಹುಲ್ ಗೆ ಬ್ರಾಹ್ಮಣ ಯುವತಿ ಜೊತೆ ಮದ್ವೆ ಮಾಡಿಸಿ ಅಂದಿದ್ದೆ: ಆದರೆ...!’

Suggested Sonia Gandhi to get Rahul married to a 'good Brahmin girl' but she didn't agree: TDP MP
Highlights

ಮತ್ತೆ ಮುನ್ನೆಲೆಗೆ ಬಂದ ರಾಹುಲ್ ಗಾಂಧಿ ಮದುವೆ ವಿಚಾರ

ಟಿಡಿಪಿ ಸಂಸದ ಸೋನಿಯಾ ಗಾಂಧಿಗೆ ಕೊಟ್ಟ ಸಲಹೆ ಏನು?

ರಾಹುಲ್ ಮದುವೆ ಬಗ್ಗೆ ಜೆಸಿ ದಿವಾಕರ್ ರೆಡ್ಡಿ ಹೇಳಿದ್ದೇನು?

ಬ್ರಾಹ್ಮಣ ಯುವತಿ ಜೊತೆ ರಾಹುಲ್ ಮದುವೆಗೆ ಪ್ರಸ್ತಾಪ

ದಿವಾಕರ್ ಪ್ರಸ್ತಾಪ ತಿರಸ್ಕರಿಸಿದ್ದ ಸೋನಿಯಾ ಗಾಂಧಿ

ನವದೆಹಲಿ(ಜು.6): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿವಾಹ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ರಾಹುಲ್ ಮದುವೆ ಕುರಿತು ಗಾಂಧಿ ಕುಟುಂಬದ ಹಿತೈಶಿ, ಮಾಜಿ ಕಾಂಗ್ರೆಸ್ಸಿಗ, ಹಾಲಿ ಟಿಡಿಪಿ ಸಂಸದ ಜೆಸಿ ದಿವಾಕರ್ ರೆಡ್ಡಿ ಮಾತನಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ರಾಜಕಾರಣದ ಮೇಲೆ ಹಿಡಿತ ಸಾಧಿಸಬೇಕಾದರೆ ಬ್ರಾಹ್ಮಣ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ಓರ್ವ ಉತ್ತಮ ಬ್ರಾಹ್ಮಣ ಯುವತಿ ಜೊತೆ ವಿವಾಹ ಮಾಡಿಸುವಂತೆ ಸೋನಿಯಾ ಗಾಂಧಿ ಅವರಿಗೆ ಹೇಳಿದ್ದೆ. ಆದರೆ ಸೋನಿಯಾ ಗಾಂಧಿ ನನ್ನ ಸಲಹೆಯನ್ನು ಕೇಳಲಿಲ್ಲ ಎಂದು ಜೆಸಿ ದಿವಾಕರ ರೆಡ್ಡಿ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. 

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯದ ಬೆಂಬಲ ಅಗತ್ಯವಿದೆ, ಈ ಹಿನ್ನೆಲೆಯಲ್ಲಿ ರಾಹುಲ್ ಗೆ ಬ್ರಾಹ್ಮಣ ಯುವತಿ ಜೊತೆ ವಿವಾಹ ಮಾಡಿಸುವಂತೆ ಸಲಹೆ ನೀಡಿದ್ದಾಗಿ ರೆಡ್ದಿ ಹೇಳಿದ್ದಾರೆ. 

ರಾಹುಲ್ ಗಾಂಧಿ ಹಾಗೂ ರಾಯ್ ಬರೇಲಿ ಕ್ಷೇತ್ರದ ಶಾಸಕಿ ಅದಿತಿ ಸಿಂಗ್ ವಿವಾಹದ ಕುರಿತು ಇತ್ತೀಚೆಗೆ ವದಂತಿಗಳು ಹಬ್ಬಿದ್ದವು, ಆದರೆ ಸ್ವತಃ ಅದಿತಿ ಈ ಬಗ್ಗೆ ಸ್ಪಷ್ಟನೆ ನೀಡಿ ರಾಹುಲ್ ತನ್ನ ಸಹೋದರನಿದ್ದಂತೆ ಎಂದು ವದಂತಿಗಳಿಗೆ ತೆರೆ ಎಳೆದಿದ್ದರು.

loader