ಮುಂಬೈ: ಬಾಲಿವುಡ್‌ನ ನಟ ಇರ್ಫಾನ್‌ ಖಾನ್‌, ಅಪರೂಪದ ಕಾಯಿಲೆಯೊಂದರಿಂದ ಬಳಲುತ್ತಿದ್ದಾರೆ. ಈ ಸಂಗತಿಯನ್ನು ಟ್ವೀಟರ್‌ನಲ್ಲಿ ಬಹಿರಂಗಪಡಿಸಿರುವ ಇರ್ಫಾನ್‌ ಖಾನ್‌, ‘ನಾನು ಅಪರೂಪದ ಕಾಯಿಲೆಯೊಂದರಿಂದ ಬಳಲುತ್ತಿದ್ದೇನೆ. ರೋಗ ನಿರ್ಣಯವಾದ ಬಳಿಕ ಉಳಿದ ವಿವರಗಳನ್ನು ಹಂಚಿಕೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.

ನನಗೆ ಕಾಯಿಲೆ ಇರುವುದನ್ನು ತಿಳಿದು ಕುಟುಂಬ ಸದಸ್ಯರು ಆಘಾತಕ್ಕೆ ಒಳಗಾಗಿದ್ದಾರೆ. ನನ್ನ ಆರೋಗ್ಯದ ಬಗ್ಗೆ ವದಂತಿಗಳನ್ನು ಹಬ್ಬಿಸದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ನನಗೆ ಏನಾಗಿದೆ ಎನ್ನುವುದನ್ನು ಒಂದು ವಾರ ಅಥವಾ 10 ದಿನಗಳಲ್ಲಿ ನಾನೇ ತಿಳಿಸುತ್ತೇನೆ’ ಎಂದು ಹೇಳಿದ್ದಾರೆ. ಈ ಮುನ್ನ ಇರ್ಫಾನ್‌ ಖಾನ್‌ ಜಾಂಡೀಸ್‌ನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿತ್ತು.