Asianet Suvarna News Asianet Suvarna News

ಪರಪ್ಪನ ಅಗ್ರಹಾರದಲ್ಲಿ ಜಯಾ ದತ್ತು ಪುತ್ರ ಕೂಗಾಡಿ, ರಂಪಾಟ ನಡೆಸಿದ್ದು ಏಕೆ ಗೊತ್ತಾ?

ಪರಪ್ಪನ ಅಗ್ರಹಾರದಲ್ಲಿ 4 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಜಯಲಲಿತಾ ದತ್ತುಪುತ್ರ ಜೈಲಿನಲ್ಲಿ ಕೂಗಾಟ ನಡೆಸಿ ರಂಪಾಟ ನಡೆಸಿದ್ದಾನೆ

Sudhakaran clash with Jail Officers
  • Facebook
  • Twitter
  • Whatsapp

ಬೆಂಗಳೂರು(ಫೆ.22): ಶಶಿಕಲಾ ಹಾಗೂ ಇಳವರಸಿ ಜೊತೆ ಪರಪ್ಪನ ಅಗ್ರಹಾರದಲ್ಲಿ 4 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಜಯಲಲಿತಾ ದತ್ತುಪುತ್ರ ಜೈಲಿನಲ್ಲಿ ಕೂಗಾಟ ನಡೆಸಿ ರಂಪಾಟ ನಡೆಸಿದ್ದಾನೆ ಎನ್ನಲಾಗಿದೆ. ನಿನ್ನೆಯಿಂದ ಸುಧಾಕರನ್ ಭೇಟಿಗೆ ಹಲವಾರು ಅಭಿಮಾನಿಗಳು ಜೈಲಿಗೆ ಆಗಮಿಸಿದ್ದರು. ಆದರೆ ಕಾರಗೃಹದ ಅಧಿಕಾರಿಗಳು ಅಭಿಮಾನಿಗಳ ಭೇಟಿಗೆ ಅವಕಾಶ ನೀಡಿರಲಿಲ್ಲ. ಈ ವಿಷಯಕ್ಕಾಗಿ ಜೈಲಿನ ಅಧಿಕಾರಿಗಳು ಹಾಗೂ ಸಹ ಕೈದಿಗಳ ಜೊತೆ ಕೂಗಾಡಿ ರಂಪಾಟ ಮಾಡಿದ್ದಾನೆ. ಅಲ್ಲದೆ ಜೈಲಿನ ಊಟ ತನ್ನ ದೇಹಕ್ಕೆ ಒಗ್ಗೋದಿಲ್ಲ, ಮನೆ ಊಟ ಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದು, ಆದರೆ ಅಧಿಕಾರಿಗಳು ತಿರಸ್ಕರಿಸಿದ್ದಾರೆ.

Follow Us:
Download App:
  • android
  • ios