ಶ್ರೀಮಂತರು ತಮ್ಮ ಬಳಿ ಇರುವ ಸಂಪತ್ತಿನ ಪ್ರದರ್ಶನ, ಹೊಸ ವಿನ್ಯಾಸ ಉಡುಗೆ ಖರೀದಿಸುವುದು ಸಾಮಾನ್ಯ. ಆದರೆ, ಭಾರತದ ಶ್ರೀಮಂತ ಮಹಿಳೆಯರ ಪೈಕಿ ಒಬ್ಬರಾದ ಇನ್ಫೋಸಿಸ್ ಫೌಂಡೇಶನ್‌ನ ಮುಖ್ಯಸ್ಥೆಯಾಗಿರುವ ಸುಧಾಮೂರ್ತಿ ಈ ಮಾತಿಗೆ ಅಪವಾದ.

ನವದೆಹಲಿ(ಜು.31): ಶ್ರೀಮಂತರು ತಮ್ಮ ಬಳಿ ಇರುವ ಸಂಪತ್ತಿನ ಪ್ರದರ್ಶನ, ಹೊಸ ವಿನ್ಯಾಸ ಉಡುಗೆ ಖರೀದಿಸುವುದು ಸಾಮಾನ್ಯ. ಆದರೆ, ಭಾರತದ ಶ್ರೀಮಂತ ಮಹಿಳೆಯರ ಪೈಕಿ ಒಬ್ಬರಾದ ಇನ್ಫೋಸಿಸ್ ಫೌಂಡೇಶನ್‌ನ ಮುಖ್ಯಸ್ಥೆಯಾಗಿರುವ ಸುಧಾಮೂರ್ತಿ ಈ ಮಾತಿಗೆ ಅಪವಾದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಶಿಗೆ ಹೋಗುವ ಮುನ್ನ ಸೀರೆ ಖರೀದಿಸಿದ್ದೇ ಕೊನೆ. 21 ವರ್ಷಗಳಲ್ಲಿ ಅವರು ತಮಗಾಗಿ ಹೊಸ ಸೀರೆಯನ್ನೇ ಖರೀದಿಸಿಲ್ಲ. ಯಾವತ್ತೂ ಶಾಪಿಂಗ್‌ಗೆ ಹೋಗಿಲ್ಲ. ತಮಗೆ ಬೇಕಾದ ಕೇವಲ ಅತ್ಯಗತ್ಯ ವಸ್ತುಗಳನ್ನು ಮಾತ್ರ ಖರೀದಿಸುತ್ತಿದ್ದಾರೆ.

ಸಾಮಾನ್ಯವಾಗಿ ಕಾಶಿಗೆ ಹೋದ ಸಂದರ್ಭದಲ್ಲಿ ಜನರು ತಮಗೆ ಇಷ್ಟವಾದ ಒಂದು ವಸ್ತುವನ್ನು ತ್ಯಜಿಸುವ ಸಂಪ್ರದಾಯವಿದೆ. ಅದೇ ರೀತಿ ಕಾಶಿಯಲ್ಲಿ ಪವಿತ್ರ ಸ್ನಾನ ಮಾಡುವಾಗ ಸುಧಾಮೂರ್ತಿ ಅವರು ಸೀರೆ ಖರೀದಿಸುವುದನ್ನು ಬಿಡುವ ನಿರ್ಧಾರಕ್ಕೆ ಬಂದಿದ್ದರು. ಅದನ್ನೂ ಇದುವರೆಗೂ ತಪ್ಪದೇ ಸುಧಾಮೂರ್ತಿ ಪಾಲಿಸಿಕೊಂಡು ಬಂದಿದ್ದಾರಂತೆ.