ಇಲ್ಲಿರುವವರು ಅಕ್ಷರಶಃ ಹುಚ್ಚು ಅಭಿಮಾನಿಗಳೇ ಇವರೆಲ್ಲರೂ ಕೂಡ ಮನೆ ಮನೆಯಲ್ಲಿ ಕೆಲವು ವರ್ಷಗಳಿಂದ ಸುದೀಪ ಅವರ ಭಾವಚಿತ್ರವನ್ನು ಮನೆಯಲ್ಲಿಟ್ಟುಕೊಂಡು ಹಾರ ಹಾಕಿ  ದೀಪ ಹಚ್ಚಿ  ಪೂಜೆ ಮಾಡುತ್ತಾರೆ. ಜೀವನದಲ್ಲಿ ಒಂದು ಬಾರಿಯಾದ್ರೂ ಆರಾಧ್ಯ ದೈವ ಸುದೀಪ್ ನನ್ನು ನೋಡಬೇಕು. ಮಾತನಾಡಿಸಬೇಕು ಎಂಬ ಹಂಬಲವಾಗಿತ್ತು.

ಚಿತ್ರದುರ್ಗ(ಡಿ.25): ಆ ಊರಿನ ಗ್ರಾಮಸ್ಥರು ಆತನನ್ನು ದೈವ ಸಮಾನರಂತೆ ಆರಾಧಿಸುತ್ತಿದ್ದರು ಆತನ ಭಾವ ಚಿತ್ರಗಳನ್ನು ಮನೆ ಮನೆಯಲ್ಲಿ ಇಟ್ಟು ನಿತ್ಯ ಪೂಜೆ ಸಲ್ಲಿಸುತ್ತಿದ್ದರು. ಯುವಕರಿಗಂತೂ ಆತ ಅಕ್ಷರಶಃ ಆರಾಧ್ಯ ದೈವನೇ ಆಗಿದ್ದಾನೆ.ಇಂದು ಆತನ ದರ್ಶನಭಾಗ್ಯ ಸಿಕ್ಕಿದ್ದೂ ದೆವರೇ ಊರಿಗೆ ಬಂದಂತೆ ಆಗಿತ್ತು..ಆ ಊರು ಯಾವುದು ಆವ್ಯಕ್ತಿ ಯಾರು ಅಂತೀರಾ ಈ ವರದಿ ನೋಡಿ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಬಗ್ಗನಾಡು ಗ್ರಾಮದಲ್ಲಿ ಕಿಚ್ಚ ಸುದೀಪನ ಅಭಿಮಾನಿಗಳು ಅಂದರೆ ತಪ್ಪಾದೀತು. ಇಲ್ಲಿರುವವರು ಅಕ್ಷರಶಃ ಹುಚ್ಚು ಅಭಿಮಾನಿಗಳೇ ಇವರೆಲ್ಲರೂ ಕೂಡ ಮನೆ ಮನೆಯಲ್ಲಿ ಕೆಲವು ವರ್ಷಗಳಿಂದ ಸುದೀಪ ಅವರ ಭಾವಚಿತ್ರವನ್ನು ಮನೆಯಲ್ಲಿಟ್ಟುಕೊಂಡು ಹಾರ ಹಾಕಿ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಜೀವನದಲ್ಲಿ ಒಂದು ಬಾರಿಯಾದ್ರೂ ಆರಾಧ್ಯ ದೈವ ಸುದೀಪ್ ನನ್ನು ನೋಡಬೇಕು. ಮಾತನಾಡಿಸಬೇಕು ಎಂಬ ಹಂಬಲವಾಗಿತ್ತು. ಇಂದು ನೋಡುವ ಭಾಗ್ಯ ಮಾತ್ರ ಲಭಿಸಿತ್ತು. ಈ ಗ್ರಾಮಸ್ಥರಿಗೆ ಆದರೆ ಮಾನಾಡಿಸುವ ಭಾಗ್ಯ ಮಾತ್ರ ಸಿಗಲಿಲ್ಲ. ಇದರಿಂದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಆದ್ರೆ ನೋಡಿ ಪುಳಿಕರಾಗಿದ್ದು, ಸಂಭ್ರಮ ಮುಗಿಲು ಮುಟ್ಟಿತ್ತು..

ಸುದೀಪ್ ಬರುವ ವಿಷಯ ಗಾಳಿಯಂತೆ ಎಲ್ಲೆಡೆ ಹರಡುತ್ತಿದ್ದಂತೆ ಗ್ರಾಮದ ಕಡೆಗೆ ಅಭಿಮಾನಿಗಳು ಸಾಗರದಂತೆ ಹರಿದು ಬಂದರು. ಸುದೀಪ್ ಬಂದು ಇಳಿಯುತ್ತಿದ್ದಂತೆ ಜಯ ಕಾರ ಮುಗಿಲುಮುಟ್ಟಿತ್ತು. ದೇವಸ್ಥಾನಕ್ಕೆ ನೇರವಾಗಿ ಹೋಗಿ ದರ್ಶನ ಮಾಡಿಕೊಂಡು ನಂತರ ಅಭಿಮಾನಿಗಳ ಕಡೆಗೆ ಕೈ ಬೀಸಿದ ಸುದೀಪ್ ಬಂದಷ್ಟೆ ಕ್ಷಣದಲ್ಲಿ ದಾವಣೆಗೆರೆ ಕಡೆಗೆ ಪ್ರಯಾಣ ಬೆಳೆಸಿದ್ರು.

ವರದಿ: ಡಿ.ಕುಮಾರಸ್ವಾಮಿ, ಚಿತ್ರದುರ್ಗ,ಸುವರ್ಣನ್ಯೂಸ್