ಅವನು ಯಾವಾಗಲು ನನ್ನ ಗೆಳೆಯ : ಶೀಘ್ರದಲ್ಲೇ ಒಟ್ಟಿಗೆ ಸಿನಿಮಾ

Sudeep Tweet About Darshan
Highlights

ಗಾಂಧಿನಗರ ಮಾತ್ರವಲ್ಲದೆ ಲಕ್ಷಾಂತರ ಅಭಿಮಾನಿಗಳು ಕೂಡ ಇಬ್ಬರು ಒಂದಾಗುವುದನ್ನು ಬಯಸುತ್ತಿದ್ದಾರೆ. ಸದ್ಯ ಸುದೀಪ್ ಅಂಬಿ ನಿಂಗೆ ವಯಸಾಯ್ತೋ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೆ, ದರ್ಶನ್ ಕುರುಕ್ಷೇತ್ರ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತಲ್ಲಿನರಾಗಿದ್ದಾರೆ.   

ಬೆಂಗಳೂರು(ಏ.27): ಚಾಲೆಂಜಿಂಗ್ ಸ್ಟಾರ್  ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಚಿತ್ರ ಶೀಘ್ರದಲ್ಲಿಯೇ ಸೆಟ್ಟೇರುವ ಸಾಧ್ಯತೆಯಿದೆ.  ಕೆಲವು ದಿನಗಳಿಂದ ದೂರವಾಗಿದ್ದ  ತಮ್ಮ ಆಪ್ತ ಸ್ನೇಹಿತನ ಬಗ್ಗೆ ಸುದೀಪ್ ಒಳ್ಳೆಯ ಮಾತನಾಡಿದ್ದಾರೆ.  
ಮಲೇಷ್ಯದಲ್ಲಿರುವ ಕಿಚ್ಚ ' ಅಭಿಮಾನಿಯೊಬ್ಬ ನೀವಿಬ್ಬರು ಒಂದಾಗಿ, ಜೊತೆಯಾಗಿ  ಸಿನಿಮಾ ಮಾಡಿ ಎಂದು ಮನವಿ ಮಾಡಿದ ಪ್ರಶ್ನೆಗೆ ಉತ್ತರಿಸುತ್ತಾ ತಮ್ಮ ಸ್ನೇಹ ಎಂದಿಗೂ ದೂರವಾಗಿಲ್ಲ. ಇಬ್ಬರಿಗೂ ಒಂದಿಕೆಯಾಗುವ ಒಂದೊಳ್ಳೆಯ ಕಥೆ ಸಿಕ್ಕರೆ  ಇಬ್ಬರು ಒಟ್ಟಾಗಿಯೇ ಸಿನಿಮಾ ಮಾಡುತ್ತೇವೆ ಎಂದು ಸ್ನೇಹಹಸ್ತವನ್ನು ಚಾಚಿದ್ದಾರೆ. ಈ ಮಾತುಗಳನ್ನು ಕೇಳಿದರೆ ಇನ್ನು ಕೆಲವೇ ದಿನಗಳಲ್ಲಿ ಇಬ್ಬರು ಒಟ್ಟಾಗಿ ನಟಿಸುವುದು ಯಾವುದೇ ಸಂದೇಹವಿಲ್ಲ. 

loader