ದರ್ಶನ್ ಟ್ವಿಟರ್'ನಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಪಟ್ಟಂತೆ ಕಿಚ್ಚ ಸುದೀಪ್ ಕೊನೆಗೂ ಮೌನ ಮುರಿದಿದ್ದಾರೆ. ನಿನ್ನೆ ಪ್ರತಿಕ್ರಿಯಿಸಲು ನಿರಾಕರಿಸಿದ್ದ ಸುದೀಪ್ ಇಂದು ಹುಬ್ಬಳ್ಳಿಯಲ್ಲಿ 'ನನಗೆ ಗೌರವ ಕೊಟ್ಟರೆ ನಾನೂ ಗೌರವ ಕೊಡುವುದಾಗಿ' ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು(ಮಾ.07): ದರ್ಶನ್ ಟ್ವಿಟರ್'ನಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಪಟ್ಟಂತೆ ಕಿಚ್ಚ ಸುದೀಪ್ ಕೊನೆಗೂ ಮೌನ ಮುರಿದಿದ್ದಾರೆ. ನಿನ್ನೆ ಪ್ರತಿಕ್ರಿಯಿಸಲು ನಿರಾಕರಿಸಿದ್ದ ಸುದೀಪ್ ಇಂದು ಹುಬ್ಬಳ್ಳಿಯಲ್ಲಿ 'ನನಗೆ ಗೌರವ ಕೊಟ್ಟರೆ ನಾನೂ ಗೌರವ ಕೊಡುವುದಾಗಿ' ಪ್ರತಿಕ್ರಿಯಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಹೆಬ್ಬುಲಿ ಸಿನಿಮಾ ಪ್ರಚಾರ ಯಾತ್ರೆಗೆ ಆಗಮಿಸಿದ್ದ ಸುದೀಪ್ ಬಳಿ ದರ್ಶನ್ ಟ್ವಿಟರ್'ನಲ್ಲಿ ನೀಡಿದ ಹೇಳಿಕೆ ಕುರಿತಾಗಿ ಮಾಧ್ಯಮ ಮಂದಿ ಪ್ರಶ್ನಿಸಿದ್ದಾರೆ. ಈ ವೇಳೆ ತೀಕ್ಷ್ಣವಾಗಿ ಉತ್ತರಿಸಿದ ಸುದೀಪ್ 'Give Respect And Take Respect' ಎಂದಿದ್ದಾರೆ.

ನಿನ್ನೆ ತುಮಕೂರಿನಲ್ಲಿ ಸುದೀಪ್'ರವರ ಬಳಿ ಇದೇ ವಿಷಯದ ಕುರಿತು ಪ್ರಶ್ನಿಸಿದಾಗ 'ನೋ ಕಮೆಂಟ್ಸ್' ಎಂದು ತೆರಳಿದ್ದರು. ಆದರೆ ಇಂದು ದರ್ಶನ್'ರಿಗೆ ಮಾತಿನ ಮೂಲಕ ಟಾಂಗ್ ನೀಡಿದ್ದಾರೆ.