Asianet Suvarna News Asianet Suvarna News

ಟಾಲಿವುಡ್, ಕಾಲಿವುಡ್ ,ಬಾಲಿವುಡ್ ಆಯ್ತು ಈಗ ಹಾಲಿವುಡ್‌'ಗೆ ಹಾರಿದ ಕಿಚ್ಚ

ಸ್ಯಾಂಡಲ್‌ವುಡ್ ಮೂಲಕ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್‌ಗೂ ಹೋಗಿದ್ದ ನಟ ಕಿಚ್ಚ ಸುದೀಪ್ ಈಗ ಹಾಲಿವುಡ್‌ಗೂ ಹಾರಿದ್ದಾರೆ. ಸೂರಪ್ಪ ಬಾಬು ನಿರ್ಮಾಣದ ‘ಕೋಟಿಗೊಬ್ಬ 3’ ಚಿತ್ರದಲ್ಲಿ  ತಾವು ಅಭಿನಯಿಸಲಿರುವುದನ್ನು ಖಚಿತಪಡಿಸಿರುವ ಬೆನ್ನಲ್ಲೇ ಹಾಲಿವುಡ್ ಸಿನಿಮಾವೊಂದರಲ್ಲಿ ಅವರು ಬಣ್ಣ ಹಚ್ಚುವುದೂ ಗ್ಯಾರಂಟಿ ಆಗಿದೆ. 

Sudeep Acting In Hollywood
  • Facebook
  • Twitter
  • Whatsapp
ಬೆಂಗಳೂರು (ಜು.06): ಸ್ಯಾಂಡಲ್‌ವುಡ್ ಮೂಲಕ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್‌ಗೂ ಹೋಗಿದ್ದ ನಟ ಕಿಚ್ಚ ಸುದೀಪ್ ಈಗ ಹಾಲಿವುಡ್‌ಗೂ ಹಾರಿದ್ದಾರೆ. ಸೂರಪ್ಪ ಬಾಬು ನಿರ್ಮಾಣದ ‘ಕೋಟಿಗೊಬ್ಬ 3’ ಚಿತ್ರದಲ್ಲಿ  ತಾವು ಅಭಿನಯಿಸಲಿರುವುದನ್ನು ಖಚಿತಪಡಿಸಿರುವ ಬೆನ್ನಲ್ಲೇ ಹಾಲಿವುಡ್ ಸಿನಿಮಾವೊಂದರಲ್ಲಿ ಅವರು ಬಣ್ಣ ಹಚ್ಚುವುದೂ ಗ್ಯಾರಂಟಿ ಆಗಿದೆ. 
 
ಆಸ್ಟ್ರೇಲಿಯಾ ಮೂಲದ ಎಡ್ಡಿ ಆರ್ಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಲಂಡನ್ ಮೂಲದ ಪ್ರತಿಷ್ಠಿತ ಸಂಸ್ಥೆ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದೆ. ನಿರ್ದೇಶಕ ಎಡ್ಡಿ ಆರ್ಯ ಅವರೇ ಸುದೀಪ್ ಅವರನ್ನು ಸಂಪರ್ಕಿಸಿ ಕತೆ ಹೇಳಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಆರ್ಮಿ ಮಾರ್ಷಲ್ ಪಾತ್ರ ಮಾಡಲಿದ್ದಾರೆ. ಚಿತ್ರಕ್ಕೆ ರಿಸನ್ ಎಂದು ಹೆಸರಿಡಲಾಗಿದೆ. ರಷ್ಯಾದ ಶೆಲ್ಯಾಬಿನ್ಸ್ಕ್  ಉಲ್ಕಾಪಾತವನ್ನು ಆಧರಿಸಿ ಎಡ್ಡಿ ಆರ್ಯ ಅವರು ಈ ಕತೆಯನ್ನು ಹೆಣೆದಿದ್ದಾರೆ. ಅಲಾಸ್ಕಾದ ಪುಟ್ಟ ನಗರವೊಂದರಲ್ಲಿ ಉಲ್ಕಾಪಾತ ಆದಾಗ ಅಲ್ಲಿನ ವಾತಾವರಣ ಕಲುಷಿತಗೊಳ್ಳುವ ಕತೆಯಲ್ಲಿ ವಿಭಿನ್ನ ದೇಶಗಳ ನಟರು ಭಾಗವಹಿಸಲಿದ್ದಾರೆ ಎಂದು ಎಡ್ಡಿ ಆರ್ಯ ಸ್ಪಷ್ಟಪಡಿಸಿದ್ದಾರೆ.
ಜೋಗಿ ಪ್ರೇಮ್ ನಿರ್ದೇಶನದ  ‘ದಿ ವಿಲನ್’ ಚಿತ್ರದ ಚಿತ್ರೀಕರಣಕ್ಕಾಗಿ ನಟ ಸುದೀಪ್ ಲಂಡನ್‌ಗೆ ಹೊರಟಿದ್ದಾರೆ. ಅವರೊಂದಿಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸೇರಿದಂತೆ ಚಿತ್ರತಂಡವೇ ಲಂಡನ್ ವಿಮಾನ ಹತ್ತಲಿದೆ. ‘ದಿ ವಿಲನ್’ ಚಿತ್ರಕ್ಕೆ ಅಲ್ಲಿ ಸುಮಾರು ಹತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ. ಈ ವೇಳೆಯಲ್ಲಿಯೇ ಅವರು ತಾವು ಅಭಿನಯಸಲಿರುವ ಹಾಲಿವುಡ್ ಚಿತ್ರದ ಕತೆ ಮತ್ತು ಪಾತ್ರದ ಬಗ್ಗೆ ನಿರ್ದೇಶಕರ ಜತೆಗೆ ಮತ್ತಷ್ಟು ಚರ್ಚೆ ನಡೆಸಲಿದ್ದಾರೆಂದು ಹೇಳಲಾಗಿದೆ.
ಆಪ್ತ ವಲಯದ ಪ್ರಕಾರ ನಟ ಸುದೀಪ್ ಹಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ನೂರರಷ್ಟು ಸತ್ಯ. ಚಿತ್ರೀಕರಣಕ್ಕೆ ಅವರು ಕಾಲ್‌ಶೀಟ್ ನೀಡಿದ್ದೂ ಆಗಿದೆ. ಚಳಿಗಾಲದ ಸಂದರ್ಭದಲ್ಲಿ ಚಿತ್ರೀಕರಣಕ್ಕಾಗಿಯೇ ಒಂದು ತಿಂಗಳ ಕಾಲ ಸುದೀಪ್ ಅಮೆರಿಕದಲ್ಲಿ ಇರಲಿದ್ದಾರೆ. ಹಾಲಿವುಡ್‌ನ ಹೆಸರಾಂತ ನಟರ ತಂಡವೇ ಈ ಚಿತ್ರದಲ್ಲಿ ಇರಲಿದೆ ಎಂದು ಹೇಳಲಾಗಿದೆ. ಈ ಮಧ್ಯೆ ಕಿಚ್ಚ ಸುದೀಪ್ ಅಭಿನಯಿಸಲಿದ್ದಾರೆನ್ನಲಾಗಿರುವ ಸೂರಪ್ಪ ಬಾಬು ನಿರ್ಮಾಣದ ‘ಕೋಟಿಗೊಬ್ಬ 3’ ಮತ್ತು ಕೃಷ್ಣ ನಿರ್ದೇಶನದ ಚಿತ್ರಗಳ ಪೈಕಿಗಳಿಗೂ ಚಾಲನೆ ಸಿಗಲಿದೆ. ಈ ಎರಡು ಚಿತ್ರಗಳ ಪೈಕಿ ಕೃಷ್ಣ ನಿರ್ದೇಶನದ ಹೊಸ ಚಿತ್ರಕ್ಕೆ ಮೊದಲು ಪೂಜೆ. ಆನಂತರ ‘ಕೋಟಿಗೊಬ್ಬ 3’ ಶುರುವಾಗಲಿದೆ.

 

Follow Us:
Download App:
  • android
  • ios