ಬೆಂಗಳೂರು (ಸೆ. 29): ಕ್ಷುಲ್ಲಕ ಕಾರಣಕ್ಕೆ ಪರಿಚಿತರೇ ಜಗಳ ತೆಗೆದು ಸೂಡಾನ್ ದೇಶದ ವಿದ್ಯಾರ್ಥಿಗೆ ಇರಿದು ಹತ್ಯೆ ಮಾಡಿರುವ ಘಟನೆ ಕಾಡುಗೊಂಡನಹಳ್ಳಿಯಲ್ಲಿ ನಡೆದಿದೆ. ಮೊನ್ಯಾಟೋಕ್ ಕ್ರಿಶ್ (೨೮) ಮೃತ ವಿದ್ಯಾರ್ಥಿ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಕೆ.ಜಿ.ಹಳ್ಳಿ ಪೊಲೀಸರು ಹೇಳಿದ್ದಾರೆ. ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ ಮೊನ್ಯಾಟೋಕ್ ಕ್ರಿಶ್ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಫಾರ್ಮಸಿ ವಿದ್ಯಾರ್ಥಿಯಾಗಿದ್ದ. ಹೆಗಡೆ ನಗರದಲ್ಲಿ ಸ್ನೇಹಿತರ ಜತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಗುರುವಾರ ರಾತ್ರಿ ಕ್ರಿಶ್ ಹೊರಗಡೆ ಹೋಗಿ ಬರುವುದಾಗಿ ಸ್ನೇಹಿತರಿಗೆ ಹೇಳಿ ಮನೆಯಿಂದ ಹೋಗಿದ್ದ.

ಸ್ಮಗ್ಲರ್ ಪಟ್ಟಿಯಲ್ಲಿ ಸುಮಲತಾ ದರ್ಶನ್ ಯಶ್ ಸಂಖ್ಯೆ?

ಮನೆಗೆ ವಾಪಸ್ ಬರುವಾಗ ಕೆ.ಜಿ.ಹಳ್ಳಿಯ ಶಾಂಪುರ ರೈಲ್ವೆ ಗೇಟ್ ಬಳಿ ಪರಿಚಿತರ ಜತೆ ಜಗಳ ನಡೆದಿದ್ದು, ದುಷ್ಕರ್ಮಿಗಳು ವಿದ್ಯಾರ್ಥಿಗೆ ಇರಿದು ಪರಾರಿಯಾಗಿದ್ದರು. ತಡರಾತ್ರಿ ಒಂದು ಗಂಟೆ ಸುಮಾರಿಗೆ ಸ್ಥಳೀಯ ನಿವಾಸಿಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿಯ ಮೊಬೈಲ್‌ನಿಂದ ಆತನ ಸ್ನೇಹಿತ ಎರಿಕ್ ಕಾಮಿಸ್ ಅಕ್ವಿಂಟೋ ಎಂಬಾತನಿಗೆ ವಿಷಯ ತಿಳಿಸಿದ್ದರು.

ಸ್ಥಳಕ್ಕೆ ಬಂದು ಸ್ನೇಹಿತರು ಗಾಯಾಳುವನ್ನು ಕೂಡಲೇ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಶನಿವಾರ ಬೆಳಗಿನ ಜಾವ ಸೂಡಾನ್ ದೇಶದ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಪ್ರೀತಿ ನಿರಾಕರಿಸಿದ ಸ್ನೇಹಿತ: ಗಂಡ-ಮಕ್ಕಳನ್ನು ನೋಡದೇ ಆತ್ಮಹತ್ಯೆಗೆ ಶರಣಾದ ಹುಚ್ಚು ಹೆಣ್ಮಗಳು

ಮನೆಯಿಂದ ವಿದ್ಯಾರ್ಥಿ ಎಲ್ಲಿಗೆ ಹೋಗಿದ್ದ ಎಂಬ ಬಗ್ಗೆಯೂ ಕೂಡ ಪರಿಶೀಲನೆ ನಡೆಯುತ್ತಿದೆ. ಘಟನೆ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.