ತರೂರ್'ರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 13, Jul 2018, 12:18 PM IST
Subramanian Swamy attacks Shashi Tharoor for Hindu Pakistan remark
Highlights

  • ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತ ಹಿಂದೂ ಪಾಕಿಸ್ತಾನವಾಗಲಿದೆ ಎಂದಿದ್ದ ಶಶಿ ತರೂರ್ 
  • ಪಾಕಿಸ್ತಾನದ ಮೇಲೆ ಪ್ರೀತಿಯಿದ್ದರೆ ಪಾಕ್ ಪ್ರಧಾನಿಯ ಸಹಾಯ ಕೇಳಲಿ ಎಂದು ವ್ಯಂಗ್ಯವಾಡಿದ ಸುಬ್ರಮಣಿಯನ್ ಸ್ವಾಮಿ

ನವದೆಹಲಿ[ಜು.13]: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತ ಹಿಂದೂ ಪಾಕಿಸ್ತಾನವಾಗಲಿದೆ ಎಂಬ ಕಾಂಗ್ರೆಸಿನ ಹಿರಿಯ ನಾಯಕ ಶಶಿ ತರೂರ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಶಶಿ ತರೂರ್ ಅವರನ್ನು ಮೆಂಟಲ್ ಆಸ್ಪತ್ರೆಗೆ ಕಳಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಶಶಿ ತರೂರ್ ಬಗ್ಗೆ ಸ್ವಲ್ಪ ಕರುಣೆ ತೋರಿ ವೈದ್ಯಕೀಯ ಸಹಾಯದ ಅಗತ್ಯವಿದ್ದರೆ ಮೆಂಟಲ್ ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಬೇಕು ಎಂದಿದ್ದಾರೆ. 

ಶಶಿ ತರೂರ್ ಅವರು ಆಹಾರದಲ್ಲಿ ಹೆಚ್ಚು ಕಡಿಮೆಯಾಗಿ ಓವರ್ ಡೋಸ್ ಆಗಿರುವ ಸಾಧ್ಯತೆಯಿದೆ. ಈ ಹೇಳಿಕೆಯನ್ನು ಗಮನಿಸಿದರೆ ಅವರು ಬಹಶಷ್ಟು ಹತಾಶೆಯಲ್ಲಿರುವುದು ಗೊತ್ತಾಗುತ್ತದೆ ಎಂದಿರುವ ಅವರು ಕಾಂಗ್ರೆಸಿನ ಹಿರಿಯ ನಾಯಕರಿಗೆ ಪಾಕಿಸ್ತಾನದ ಮೇಲೆ ಪ್ರೀತಿಯಿದ್ದರೆ ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ಸಹಾಯ ಮಾಡಲು ಪಾಕ್ ಪ್ರಧಾನಿಯ ಸಹಾಯ ಕೇಳಲಿ ಎಂದಿದ್ದಾರೆ.

loader