ಬೆಂಗಳೂರು(ಸೆ.10): ರಾಜ್ಯದಲ್ಲಿ ಪೊಲೀಸರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕರ ಮೇಲೆ ಪೊಲೀಸರ ದಬ್ಬಾಳಿಕೆಗಳು ಹೆಚ್ಚಾಗತೊಡಗಿವೆ. ಕಗ್ಗಲಿಪುರದ ಸಬ್ ಇನ್ಸ್ಪೆಕ್ಟರ್ವೊಬ್ಬ ವ್ಯಕ್ತಿಯೊಬ್ಬನ ಮೇಲೆ ಮನಸೋ ಇಚ್ಚೆ ಥಳಿಸಿದ್ದಾನೆ.
ಕಗ್ಗಲಿಪುರದ ಸಬ್ ಇನ್ಪೆಕ್ಟರ್ ಸುನೀಲ್, ಪ್ರಗತಿ ಟೆಂಟ್ ಹೌಸ್ ನಡೆಸುತ್ತಿದ್ದ ಚೆಲುವಯ್ಯ ಎಂಬಾತನ ಮೇಲೆಮನಸೋ ಇಚ್ಚೆ ಥಳಿಸಿದ್ದಾನೆ. ಕಳೆದ ಭಾನುವಾರ ರಾತ್ರಿ ಟೆಂಟ್ ಹೌಸ್ ಮುಂದೆ ವ್ಯಕ್ತಿಯೊಬ್ಬನ ಜೊತೆ ಮಾತನಾಡುತ ನಿಂತಿದ್ದ ಚೆಲುವಯ್ಯನ ಮೇಲೆ, ಜೀಪಿನಲ್ಲಿ ಬಂದ ಸಬ್ ಇನ್ಸ್ ಪೆಕ್ಟರ್ ಏಕಾ ಏಕಿ ಥಳಿಸಿದ್ದಾರೆ. ಕೇಳಿದರೆ ಕುಡಿದು ಗಲಾಟೆ ಮಾಡ್ತಿದ್ದೀರಾ ಎಂಬ ಉತ್ತರ ಕೊಟ್ಟ ಸಬ್ ಇನ್ಸ್ಪೆಕ್ಟರ್, ಚೆಲುವಯ್ಯನಿಗೆ ಹೊಡೆಯಬಾರದ ಜಾಗಕ್ಕೆಲ್ಲಾ ಹೊಡೆದಿದ್ದಾನೆ. ಪರಿ ಪರಿ ಬೇಡಿಕೊಂಡರೂ ಬಿಡದ ಸಬ್ ಇನ್ಸ್ಪೆಕ್ಟರ್ ರೌದ್ರಾವತಾರ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
