ದಕ್ಷಿಣ ಭಾರತದ ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನ ಪಡೆದರೆ ತಮಿಳುನಾಡು ಮೊದಲನೇ ಸ್ಥಾನದಲ್ಲಿದೆ ಎಂಬ ಆತಂಕಕಾರಿ ಅಂಕಿ-ಅಂಶಗಳು ಲಭಿಸಿವೆ.
ನವದೆಹಲಿ(ಜ.07): ದಕ್ಷಿಣ ಭಾರತದ ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನ ಪಡೆದರೆ ತಮಿಳುನಾಡು ಮೊದಲನೇ ಸ್ಥಾನದಲ್ಲಿದೆ ಎಂಬ ಆತಂಕಕಾರಿ ಅಂಕಿ-ಅಂಶಗಳು ಲಭಿಸಿವೆ. ದಕ್ಷಿಣ ರಾಜ್ಯಗಳ ಪೈಕಿ 2016 ರಲ್ಲಿ ಕರ್ನಾಟಕದಲ್ಲಿ 540 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿನದ ಸರಾಸರಿ ಯನ್ನು ತೆಗೆದರೆ 1.47ರ ದರದಲ್ಲಿ ಆತ್ಮಹತ್ಯೆಗಳು ನಡೆದಿವೆ.
ಅರ್ಥಾತ್ ದಿನಕ್ಕೆ ಹೆಚ್ಚೂಕಡಿಮೆ ಓರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಂತಾಗಿದೆ. ಇನ್ನು ಮೊದಲ ಸ್ಥಾನದಲ್ಲಿರುವ ತಮಿಳು ನಾಡಿನಲ್ಲಿ 2016 ರಲ್ಲಿ 981 ಆತ್ಮಹತ್ಯೆಗಳು ನಡೆದಿದ್ದು ದಿನದ ಸರಾಸರಿ 2.68 ಇನ್ನು ಮೂರನೇ ಸ್ಥಾನದಲ್ಲಿ ತೆಲಂಗಾಣ (349), 4ನೇ ಸ್ಥಾನದಲ್ಲಿ ಕೇರಳ (340) ಹಾಗೂ 5ನೇ ಸ್ಥಾನದಲ್ಲಿ ಆಂಧ್ರ ಪ್ರದೇಶ (295) ಇವೆ.
ಸಾಮಾಜಿಕ, ಮಾನಸಿಕ ಹಾಗೂ ಜೈವಿಕ ಕಾರಣಗಳು ವಿದ್ಯಾರ್ಥಿಗಳ ಮೇಲೆ ಒತ್ತಡ ಬೀಳಲು ಮುಖ್ಯ ಕಾರಣ. ಕುಡಿತ, ಮಾದಕ ವಸ್ತು ಸೇವನೆ- ಇತ್ಯಾದಿ ದುಶ್ಚಟಗಳು ಕೂಡ ಕೆಲ ಮಟ್ಟಿಗೆ ಕಾರಣ ಎಂದು ಅಧ್ಯಯನದಿಂದ ತಿಳಿದುಬಂದಿದೆ ಎಂದು ತಜ್ಞರು ಹೇಳಿದ್ದಾರೆ.
