ಕಡಲ ತೀರಕ್ಕೆ ಪ್ರವಾಸಕ್ಕೆ ಹೋದ ಕಾಲೇಜು ವಿದ್ಯಾರ್ಥಿಗಳು ಪೊಲೀಸರ ಅತಿಥಿಯಾಗಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಕಾರವಾರದ ರವೀಂದ್ರನಾಥ ಬೀಚ್ ಸುತ್ತಾಡಲು ಬಂದು ಯುವತಿಯನ್ನು ಚುಡಾಯಿಸಿದ ಮಂಡ್ಯ ಜಿಲ್ಲೆಯ ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳು ಈಗ ಕಂಬಿ ಎಣಿಸುತ್ತಿದ್ದಾರೆ.
ಕಾರವಾರ: ಕಡಲ ತೀರಕ್ಕೆ ಪ್ರವಾಸಕ್ಕೆ ಹೋದ ಕಾಲೇಜು ವಿದ್ಯಾರ್ಥಿಗಳು ಪೊಲೀಸರ ಅತಿಥಿಯಾಗಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಕಾರವಾರದ ರವೀಂದ್ರನಾಥ ಬೀಚ್ ಸುತ್ತಾಡಲು ಬಂದು ಯುವತಿಯನ್ನು ಚುಡಾಯಿಸಿದ ಮಂಡ್ಯ ಜಿಲ್ಲೆಯ ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳು ಈಗ ಕಂಬಿ ಎಣಿಸುತ್ತಿದ್ದಾರೆ.



ಪ್ರವಾಸಕ್ಕೆಂದು ಬೀಚ್’ಗೆ ಹುಡುಗರು ಆಗಮಿಸಿದ್ದು ಯುವತಿಯೊಬ್ಬಳನ್ನು ಚುಡಾಯಿಸಿದ್ದಾರೆ. ಅದನ್ನು ಸ್ಥಳೀಯರು ಪ್ರಶ್ನಿಸಿದ್ದಕ್ಕೆ, ರಂಪಾಟ ನಡೆಸಿದ ವಿದ್ಯಾರ್ಥಿಗಳು ಡ್ರೈವ್ ಇನ್ ಹೊಟೇಲನ್ನೇ ಧ್ವಂಸ ಗೊಳಿಸಿದ್ದಾರೆ.
ಈ ಸಂಬಂಧ ಬಿಜಿಎಸ್ ಕಾಲೇಜ್’ನ 54 ಪ್ರವಾಸಿ ವಿದ್ಯಾರ್ಥಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
