ಶಿವಮೊಗ್ಗ (ಮಾ. 07): ಸಾಗರದ ಇಂದಿರಾಗಾಂಧಿ ಕಾಲೇಜಿನ ಭಜರಂಗಿ ಡ್ಯಾನ್ಸ್ ಹಂಗಾಮ ವಿವಾದದ  ಘಟನೆ ಮಾಸುವ ಮುನ್ನವೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. 

ಮಂಗನ ಕಾಯಿಲೆಗೆ ಸಾಗರದಲ್ಲಿ ಲ್ಯಾಬ್‌, ಆಸ್ಪತ್ರೆ ತೆರೆಯಲು ನಿರ್ಧಾರ

ಟ್ರಡಿಶನಲ್ ಡೇ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಇಸ್ಲಾಂ ಧರ್ಮದ ಸಂಪ್ರದಾಯದಂತೆ ಜುಬ್ಬಾ, ಪೈ ಜಾಮ್, ಟೋಪಿ ಹಾಕಿದ್ದಕ್ಕೆ ಹಿಂದೂ ಯುವಕರು ಶಿವಾಜಿ, ಶಿವಾಜಿ ಎಂದು ಘೋಷಣೆ ಕೂಗಿರುವ ಘಟನೆ ಸಾಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿಗಳ ನಡುವೆ ಪರಸ್ಪರ ಕೈ ಕೈ ಮಿಲಾಸುವಿಕೆ ನಡೆದಿದೆ. ಕಾಲೇಜಿನಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. 

ಗೊಂದಲಕ್ಕೆ ಕಾರಣವಾದ ಕಾಲೇಜ್ ಡೇ ಕಾರ್ಯಕ್ರಮ ಗದ್ದಲದಲ್ಲಿಯೇ ಮುಕ್ತಾಯಗೊಂಡಿದೆ. 

"