ಬೆಂಗಳುರು (ಡಿ. 27): ಜೆಪಿ ನಗರದ 7 ನೇ ಕ್ರಾಸ್ ನಲ್ಲಿರುವ ಅಪಾರ್ಟ್ ಮೆಂಟ್ ನ 7 ನೇ ಮಹಡಿಯಿಂದ ಬಿದ್ದು ಕಾರ್ತಿಕ್ (16) ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ ಅಂಡ್ ಟಿಟಿ ಸೌತ್ ಸಿಟಿ ಅಪಾರ್ಟ್ ಮೆಂಟಲ್ಲಿ ಈ ದುರ್ಘಟನೆ ಸಂಭವಿಸಿದೆ.

ಟ್ಯೂಷನ್ ಹೋಗುವ ವಿಚಾರಕ್ಕೆ ಪೋಷಕರ ಜೊತೆ ಜಗಳ ನಡೆದಿದೆ ಎನ್ನಲಾಗಿದೆ. ಪೋಷಕರು ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಹುಳಿಮಾವು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.