ಮೊಬೈಲ್ ಕೊಡಿಸಲಿಲ್ಲ ಎಂದು ಆತ್ಮಹತ್ಯೆ
ಮೈಸೂರು(ಅ.09): ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಗಾಢವಾದ ಕಾರಣಗಳನ್ನ ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ವಿಧ್ಯಾರ್ಥಿನಿ ಕನಿಷ್ಠ ಮೋಬೈಲ್'ಗೋಸ್ಕರ ತನ್ನ ಜೀವ ಕಳೆದುಕೊಂಡಿದ್ದಾಳೆ.
ಮೈಸೂರಿನ ರಾಘವೇಂದ್ರ ಬಡಾವಣೆ ನಿವಾಸಿ 19 ನೇ ವಯಸ್ಸಿನ ಮೊನಿಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಲೇಜು ಸೇರಿದ ಹಿನ್ನಲೆಯಲ್ಲಿ ಮೊಬೈಲ್ ಬೇಕು ಎಂದು ಮೊನಿಷಾ ತಂದೆಯ ಬಳಿ ಹಟ ಹಿಡಿದಿದ್ದಳು. ತಂದೆ ಪರೀಕ್ಷೆ ಮುಗಿದ ಬಳಿಕ ಮೊಬೈಲ್ ಕೊಡಿಸುವುದಾಗಿ ತಂದೆ ಸಮಜಾಯಿಷಿ ನೀಡಿದ್ದರು. ಆದರೂ ಒಪ್ಪದೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
