ವಿದ್ಯಾರ್ಥಿಯ ಸಾವಿನಿಂದಾಗಿ ಶಾಲೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಕೆ.ಆರ್. ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.        

ಮಂಡ್ಯ(ಡಿ.28): ಊಟ ಮಾಡಿ ಕೈತೊಳೆಯುತ್ತಿದ್ದಂತೆ ತಲೆಸುತ್ತಿ ಬಂದು ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ಮೃತಪಟ್ಟಿರುವ ಘಟನೆ ನಗರದ ಕೆ.ಆರ್ ಪೇಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಮಾಂಬಳ್ಳಿ ಗ್ರಾಮದ ಕೃಷ್ಣೇಗೌಡ, ಸುಗುಣ ದಂಪತಿಯ ಪುತ್ರ ರಂಜಿತ್ ಕೃಷ್ಣ(14) ಮೃತ ದುರ್ದೈವಿ. ಊಟಮಾಡಿ 9ನೇ ತರಗತಿ ಓದುತ್ತಿದ್ದ ರಂಜಿತ್ ಕೈತೊಳೆದುಕೊಳ್ಳಲು ನೀರಿನ ಟ್ಯಾಂಕ್ ಬಂದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ತಲೆ ಹಿಡಿದುಕೊಂಡು ಒದ್ದಾಡುತ್ತಿದ್ದನ್ನು ಗಮನಿಸಿ ಆತನನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿತಾದರೂ, ಮಾರ್ಗ ಮಧ್ಯೆಯೇ ವಿದ್ಯಾರ್ಥಿ ಅಸುನೀಗಿದ್ದಾನೆ.

ವಿದ್ಯಾರ್ಥಿಯ ಸಾವಿನಿಂದಾಗಿ ಶಾಲೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಕೆ.ಆರ್. ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.