ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ)ವು ಪ್ರಸಕ್ತ ಶೈಕ್ಷಣಿಕ ಸಾಲಿನ ರಿಯಾಯಿತಿ ದರದ ಸ್ಮಾರ್ಟ್‌ ಕಾರ್ಡ್‌ ಮಾದರಿಯ ವಿದ್ಯಾರ್ಥಿ ಬಸ್‌ ಪಾಸ್‌ ದರ ಪರಿಷ್ಕರಿಸಿದ್ದು, ಕನಿಷ್ಠ .100 ರೂ.ರಿಂದ ಗರಿಷ್ಠ .250 ರೂ.ಹೆಚ್ಚಳ ಮಾಡಿದೆ.

ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳ ಬಸ್‌ ಪಾಸ್‌ ದರ ಏರಿಕೆ ಮಾಡಲಾಗಿದೆ. ಪ್ರೌಢಶಾಲಾ ಬಾಲಕಿಯರ ಬಸ್‌ ಪಾಸ್‌ ದರವನ್ನು .400 ರೂ.ರಿಂದ .500 ರೂ.ಗೆ ಹಾಗೂ ಬಾಲಕರ ಪಾಸ್‌ ದರವನ್ನು .600 ರೂ.ರಿಂದ .700 ರೂ.ಗೆ ಹೆಚ್ಚಿಸಿದೆ. ಪಿಯುಸಿ ವಿದ್ಯಾರ್ಥಿಗಳ ಬಸ್‌ ದರವನ್ನು .900 ರೂ. ರಿಂದ .1050 ರೂ. ಪದವಿ ವಿದ್ಯಾರ್ಥಿಗಳ ಪಾಸ್‌ ದರವನ್ನು .1100 ರೂ. ರಿಂದ .1260 ರೂ., ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿಗಳ ಪಾಸ್‌ ದರ .1150 ರೂ.ರಿಂದ .1400 ರೂ. ತಾಂತ್ರಿಕ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಪಾಸ್‌ ದರ .1680 ರೂ, ರಿಂದ .1920 ರೂ. ಹಾಗೂ ಸಂಜೆ ಕಾಲೇಜು, ಪಿಎಚ್‌ಡಿ ವಿದ್ಯಾರ್ಥಿಗಳ ಪಾಸ್‌ ದರವನ್ನು .1480ರಿಂದ .1680ಕ್ಕೆ ಹೆಚ್ಚಳ ಮಾಡಲಾಗಿದೆ.

ವಿದ್ಯಾರ್ಥಿಗಳು ಬಸ್ ಪಡೆಯೋದು ವೆರಿ ಸಿಂಪಲ್

ಪ್ರಸ್ತುತ ಎಲ್ಲ ವರ್ಗದ 1ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಸೌಲಭ್ಯ ಕಲ್ಪಿಸಲಾಗಿದೆ. ಈ ವರ್ಗದ ವಿದ್ಯಾರ್ಥಿಗಳು ಹೊಸದಾಗಿ ಪಾಸ್‌ ಪಡೆಯಲು .200 ಸೇವಾ ಶುಲ್ಕ ಪಾವತಿಸಬೇಕು. ಕಳೆದ ಸಾಲಿನ ಪಾಸ್‌ ನವೀಕರಿಸಲು ವಿದ್ಯಾರ್ಥಿಗಳು .170 ಸೇವಾ ಶುಲ್ಕ ಮಾತ್ರ ಪಾವತಿಸಬೇಕು. ಇನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗದ ವಿದ್ಯಾರ್ಥಿಗಳಿಗೆ 1 ರಿಂದ ಸ್ನಾತಕೋತ್ತರ ಪದವಿ ವರೆಗೂ ಉಚಿತ ಬಸ್‌ ಪಾಸ್‌ ಸೌಲಭ್ಯ ಕಲ್ಪಿಸಲಾಗಿದೆ. ಈ ಸಮುದಾಯದ ವಿದ್ಯಾರ್ಥಿಗಳು ಬಸ್‌ ಪಾಸ್‌ ಪಡೆಯಲು .200 ರೂ. ಸೇವಾ ಶುಲ್ಕ ಮಾತ್ರ ಪಾವತಿಸಬೇಕು. ವಿದ್ಯಾರ್ಥಿ ಬಸ್‌ ಪಾಸ್‌ ದರ ಏರಿಕೆ ಮಾಡಿರುವ ಬಿಎಂಟಿಸಿಯು ಸೇವಾ ಶುಲ್ಕದಲ್ಲಿ ಯಾವುದೇ ಏರಿಸಿಲ್ಲ. 

ವಿದ್ಯಾರ್ಥಿ ಬಸ್‌ ದರ ಮಾಹಿತಿ