ಮೈಸೂರು[.ನ.15]: ಮೊಬೈಲ್‌ ಗೆ ಈಗಿನ ಮಕ್ಕಳು ಅದೆಷ್ಟು ಅಡಿಕ್ಟ್ ಆಗಿದ್ದಾರೆ ಎಂಬುವುದಕ್ಕೆ ಮೈಸೂರಿನಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. 10 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮೊಬೈಲ್ ಕಳೆದುಕೊಂಡ ಚಿಂತೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮೈಸೂರಿನ ಗಾಯಿತ್ರಿಪುರಂನ ಖಾಸಗಿ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ನಿಖಿತಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಆತ್ಮಹತ್ಯೆಗೂ ಮೊದಲು ಈಕೆ ತನ್ನ ಮೊಬೈಲ್ ಕಳೆದುಕೊಂಡಿದ್ದು, ಇದರಿಂದ ವಿಚಲಿತಳಾಗಿದ್ದಳೆನ್ನಳಾಗಿದೆ. ಮೊಬೈಲ್ ಕಳೆದುಕೊಂಡ ಚಿಂತೆಯಲ್ಲಿ ಈಕೆ ನೇಣು ಬಿಗಿದುಕೊಂಡಿದ್ದಾಳೆನ್ನಲಾಗಿದೆ.

ಸದ್ಯ ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.