ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪ್ರದೀಪ್ ಹಾಗೂ ಸುನಿಲ್ ಸಹ ಟ್ರಿಪ್'ಗೆ ತೆರಳಿದ್ದರು. ಇವರಿಬ್ಬರು ಪ್ರವಾಸದಲ್ಲಿರುವಾಗ ಪವಿತ್ರಾಗೆ ಅಸಭ್ಯವಾಗಿ ನಿಂದಿಸುವುದರ ಜೊತೆ ಅಶ್ಲೀಲವಾಗಿ ನಿಂದಿಸಿದ್ದಾರೆ.
ಬೆಂಗಳೂರು(ಮಾ.09): ಉಪನ್ಯಾಸಕರಿಬ್ಬರು ಅಶ್ಲೀಲವಾಗಿ ನಿಂದಿಸಿದ ಕಾರಣ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬ್ಯಾಡರಹಳ್ಳಿ ಸಮೀಪದ ಈಸ್ಟ್ ವೆಸ್ಟ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿ ಪವಿತ್ರ(20) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ. ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಬಿಕಾಂ ಎರಡನೆ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ಈಕೆ ಕಾಲೇಜಿನಿಂದ ವಿದ್ಯಾರ್ಥಿಗಳ ಜೊತೆ ಪ್ರವಾಸಕ್ಕೆ ತೆರಳಿದ್ದಳು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪ್ರದೀಪ್ ಹಾಗೂ ಸುನಿಲ್ ಸಹ ಟ್ರಿಪ್'ಗೆ ತೆರಳಿದ್ದರು. ಇವರಿಬ್ಬರು ಪ್ರವಾಸದಲ್ಲಿರುವಾಗ ಪವಿತ್ರಾಗೆ ಅಸಭ್ಯವಾಗಿ ನಿಂದಿಸುವುದರ ಜೊತೆ ಅಶ್ಲೀಲವಾಗಿ ನಿಂದಿಸಿದ್ದಾರೆ. ಇದರಿಂದ ಮನನೊಂದ ಈಕೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಸ್ವಸ್ಥಗೊಂಡ ಈಕೆಯನ್ನು ಸ್ಥಳೀಯ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೇರಿಸಲಾಗಿದೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
