ಇದರಿಂದ ಕುಪಿತಗೊಂಡ ಪೇದೆ ಪಿಎಸ್’ಐ ಜೊತೆ ವಾಗ್ವಾದಕ್ಕಿಳಿದಿದ್ದರು. ಹಾಜರಾತಿ ಬಗ್ಗೆ ವಿಚಾರಿಸಿದ್ದಕ್ಕೆ ಪೇದೆಯೇ ಪಿಎಸ್ಐ ಮೇಲೆ ಹಲ್ಲೆ ಮಾಡಿರುವ ಆರೋಪ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ (ಫೆ.02): ಕಾನೂನು ಕಾಪಾಡಬೇಕಾದ ಆರಕ್ಷಕರೇ ಠಾಣೆಯಲ್ಲಿ ಕೈ ಕೈ ಮಿಲಾಯಿಸಿರುವ ಘಟನೆ ಬೆಳಗಾವಿಯ ಕಾಗವಾಡ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಪೇದೆ ಸರಿಯಾಗಿ ಕೆಲಸಕ್ಕೆ ಹಾಜರಾಗದ ಹಿನ್ನೆಲೆ, ಹಾಜರಾತಿಯಲ್ಲಿ ಪಿಎಸ್’ಐ ಆನಂದ್ ಗೈರುಹಾಜರಿ ಹಾಕಿದ್ದರು.
ಇದರಿಂದ ಕುಪಿತಗೊಂಡ ಪೇದೆ ಪಿಎಸ್’ಐ ಜೊತೆ ವಾಗ್ವಾದಕ್ಕಿಳಿದಿದ್ದರು. ಹಾಜರಾತಿ ಬಗ್ಗೆ ವಿಚಾರಿಸಿದ್ದಕ್ಕೆ ಪೇದೆಯೇ ಪಿಎಸ್ಐ ಮೇಲೆ ಹಲ್ಲೆ ಮಾಡಿರುವ ಆರೋಪ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೇದೆ ರಾಜುವನ್ನು ವಶಕ್ಕೆ ಪಡೆದ ಪೊಲೀಸರು, ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.